ಕಾಸರಗೋಡು ಪೆರಿಯಾ ಆಲ್ಕೋಡು ಬೇಕಲ ಗೋಕುಲಂ ಗೋಶಾಲೆಯಲ್ಲಿ ನಡೆದ ದೀಪಾವಳಿ ಸಂಗೀತೋತ್ಸವ ಕಾರ್ಯಕ್ರಮದ ಸಮಾರಂಭದಲ್ಲಿ ಹಿರಿಯ ಸಂಗೀತ ಕಲಾವಿದ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ವೆಳ್ಳಿಕ್ಕೋತ್ತ್ ವಿಷ್ಣು ಭಟ್ ಅವರನ್ನು ಗುರುರತ್ನ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ವಿಷ್ಣು ಭಟ್ ಅವರಿಗೆ ತಾಮ್ರಫಲಕದೊಂದಿಗೆ ಈ ಪುರಸ್ಕಾರ ನೀಡಿದರು.ಹಿರಿಯ ಕಲಾವಿದರಾದ ಡಾ. ಪದ್ಮಾ ಸುಬ್ರಹ್ಮಣ್ಯಂ, ಪರಂಪರಾ ವಿದ್ಯಾಪೀಠದ ಆಚಾರ್ಯ ಡಾ. ವಿಷ್ಣುಪ್ರಸಾದ್ ಹೆಬ್ಬಾರ್, ಡಾ. ನಾಗರತ್ನಾ ಹೆಬ್ಬಾರ್ ಮತ್ತಿತರರು ಉಪಸ್ಥಿತರಿದ್ದರು. ವೆಳ್ಳಿಕ್ಕೋತ್ ವಿಷ್ಣು ಭಟ್ ಅವರು ಸುಮಾರು ಮೂರುವರೆ ದಶಕಗಳಿಂದ ಸಂಗೀತಯಾತ್ರೆ, ಭಾವೈಕ್ಯಯಾತ್ರೆ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನೂ ಮಾಡಿದವರು. ಕರ್ಣಾಟಕ ಶಾಸ್ತ್ರೀಯ ಸಂಗೀತದ ಗಾನಭೂಷಣರಾದ ಅವರಿಗೆ ಕೇರಳ ಸರಕಾರದ ಸಹಿತ ಹಲವು ಪ್ರಶಸ್ತಿಗಳು ಲಭಿಸಿವೆ. ಸಿನಿಮಾಗಳಲ್ಲೂ ಅವರು ಹಾಡಿದ್ದಾರೆ. ಅವರು ಪ್ರಸಿದ್ಧ ಯಕ್ಷಗಾನ ಭಾಗವತರಾಗಿದ್ದ ದಿವಂಗತ ಮಾಂಬಾಡಿ ನಾರಾಯಣ ಭಾಗವತರ ಮೊಮ್ಮಗ. ಕುದ್ರೆಕೋಡ್ಲು ಮನೆತನದ ದಿ.ಗೋವಿಂದ ಭಟ್ ಮತ್ತು ದಿ.ಗೌರಿ ಅಮ್ಮ ಅವರ ಮಗ.
Be the first to comment on "ವೆಳ್ಳಿಕ್ಕೋತ್ ವಿಷ್ಣು ಭಟ್ ಅವರಿಗೆ ಗುರುರತ್ನ ಪುರಸ್ಕಾರ ಪ್ರದಾನ"