ಅಮ್ಮುಂಜೆಯಲ್ಲಿ ನಡೆದ ೨೨ನೆಯ ಬಂಟ್ವಾಳ ತಾಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನದ ದಿನಾಚರಣೆ ಸವಿನೆನಪು

ಕವಿಯೊಬ್ಬ ಕವಿತೆಯನ್ನು ಬರೆದು ಅದರ ನಾನಾರ್ಥಗಳನ್ನು ಗ್ರಹಿಸಲು ಓದುಗರಿಗೆ ಬಿಟ್ಟುಕೊಡುವಂತೆ,ಅಮ್ಮುಂಜೆಯ ಸಾಹಿತ್ಯ ಸಮ್ಮೇಳನದ ಅರ್ಥ ವ್ಯಾಪ್ತಿಯನ್ನು ತಾವೇ ಹೇಳಿಕೊಳ್ಳದೆ ಜನತೆಯ ಮುಂದೆ ಬಿಟ್ಟು ಕೊಟ್ಟವರು ಇಲ್ಲಿನ ಸ್ವಾಗತ ಸಮಿತಿಯ ಮಹಾನುಭಾವರು ಎಂಬುದಾಗಿ ಮೊಡಂಕಾಪು ದೀಪಿಕಾ ಪ್ರೌಢಶಾಲಾ ವಿಶ್ರಾಂತ ಮುಖ್ಯ ಶಿಕ್ಷಕ,ಚಿಂತಕ ಹಾಗೂ ರಂಗಭೂಮಿ ತಜ್ಞ ಮಹಾಬಲೇಶ್ವರ ಹೆಬ್ಬಾರ್ ಹೇಳಿದರು.

ಅವರು ಅಮ್ಮುಂಜೆ ೨೨ನೆಯ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಹಾಗೂ ಅಮ್ಮುಂಜೆಯ ಸಾಹಿತ್ಯಾಭಿಮಾನಿಗಳು ಅಮ್ಮುಂಜೆ ಅನುದಾನಿತ ಹಿ.ಪ್ರಾ,ಶಾಲೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಮ್ಮುಂಜೆಯಲ್ಲಿ ನಡೆದ ೨೨ನೆಯ ಬಂಟ್ವಾಳ ತಾಲೂಕಿನ ಅಭೂತಪೂರ್ವ ಕನ್ನಡ ಸಾಹಿತ್ಯ ಸಮ್ಮೇಳನದ ದಿನಾಚರಣೆ ಸವಿನೆನಪು ಕಾರ್ಯಕ್ರಮದಲ್ಲಿ ಸಮ್ಮೇಳನದ ಅವಲೋಕನ ಗೈದು ಮಾತನಾಡಿದರು.

ಅವರು ಮಾತನಾಡುತ್ತಾ ಜನರ ದೃಷ್ಟಿ ಬೇರೆ ಬೇರೆ ಇರುತ್ತದೆ.ಆದರೆ ಅದರಲ್ಲಿನ ಅಂತಿಮ ವಿಮರ್ಶೆ ಬಹಳ ಉತ್ತಮವಾಗಿರುತ್ತದೆ.ಅದಕ್ಕೆ ಸಾಕ್ಷಿಯಾಗಿ ಅಮ್ಮುಂಜೆಯ ಬಡಕಬೈಲು ಪರಮೇಶ್ವರ ರಾವ್ ಮಹಾದ್ವಾರದ ಬಳಿಯಿಂದ ಸಂಭ್ರಮದಿಂದ ನಡೆದ ಮೆರವಣಿಗೆಯಿಂದ ತೊಡಗಿ ಅಮ್ಮುಂಜೆ ಅನುದಾನಿತ ಹಿ.ಪ್ರಾ.ಶಾಲಾ ವಠಾರದಲ್ಲಿ ಕಳೆದ ವರ್ಷ ನವೆಂಬರ್ ೧೨ ಮತ್ತು ೧೩ರಂದು ಜರುಗಿದ ಸಾಹಿತ್ಯ ಸಮ್ಮೇಳನ ಎಂದೆಂದೂ ಸ್ಮೃತಿ ಪಟಲದಲ್ಲದೆ ಎಂದರು.

ಸಮಾರಂಭದಲ್ಲಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಕಾಸರಗೋಡು ಪೆರಿಯದ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಚೇತನ್ ಮುಂಡಾಜೆ ಕನ್ನಡ ನಾಡು ನುಡಿಯ ಬಗ್ಗೆ ಉಪನ್ಯಾಸ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ! ಎಂ.ಪಿ.ಶ್ರೀನಾಥ್ ಮಾತನಾಡಿ ಕನ್ನಡ ಪರಿಷತ್ತಿನಲ್ಲಿ ಹೆಚ್ಚು ಹೆಚ್ಚು ಮಂದಿ ಅಜೀವ ಸದಸ್ಯತ್ವವನ್ನು ಪಡೆಯಬೇಕು ಎಂಬುದಾಗಿ ಅದಕ್ಕೆ ಚಾಲನೆ ಕೊಟ್ಟು ಸಲಹೆ ನೀಡಿದರು.

೨೨ ನೆಯ ಅಮ್ಮುಂಜೆಯ ಬಂಟ್ವಾಳ ತಾಲೂಕು ಸಮ್ಮೇಳನದ ಸರ್ವಾಧ್ಯಕ್ಷ ವಿಶ್ರಾಂತ ಪ್ರಾಂಶುಪಾಲ ಹಾಗೂ ಪತ್ರಕರ್ತ ಪ್ರೊ!! ಬಾಲಕೃಷ್ಣ ಗಟ್ಟಿ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಸಮ್ಮೇಳನದ ಮೆಲುಕು ಹಾಕಿ ಅದಕ್ಕಾಗಿ ಶ್ರಮಿಸಿದ ಅಮ್ಮುಂಜೆ ನಾಗರಿಕರನ್ನು ಶ್ಲಾಘಿಸಿದರು.
ಅತಿಥಿಗಳಾಗಿ ಪಾಲ್ಗೊಂಡ ಬಂಟ್ವಾಳ ಕಸಾಪದ ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ ಸಮ್ಮೇಳನವನ್ನು ನೆನಪಿಸುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿರಲಿ ಎಂದರು.

ಕ್ರೀಡಾಪಟು,ಕೃಷಿಕ,ಸ್ವಯಂನಿವೃತ್ತ ವ್ಯಾಪಾರಿ ಹಾಗೂ ಪರೋಪಕಾರಿ ಸಮಾಜಸೇವಕ ಎ.ಕರುಣಾಕರ ಆಳ್ವ ಅವರನ್ನು ಅಮ್ಮುಂಜೆಯ ನಾಗರಿಕ ಹಿತರಕ್ಷಣಾ ವೇದಿಕೆ ಮತ್ತು ಅಮ್ಮುಂಜೆಯ ಗ್ರಾಮಸ್ಥರ ಪರವಾಗಿ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸಮ್ಮೇಳನದ ಸ್ವಾಗತ ಸಮಿತಿಯ ಜೊತೆ ಕಾರ್ಯದರ್ಶಿ ಪ್ರಸಾದ್ ಸನ್ಮಾನ ಪತ್ರ ವಾಚಿಸಿದರು.

ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು.ಕೆನರಾ ಕಾಲೇಜು ವಿಶ್ರಾಂತ ಪ್ರಾಂಶುಪಾಲ ಜಿ.ಶಂಕರ ಶೆಟ್ಟಿ ಗುಂಡಿಲಗುತ್ತು,ಅಮ್ಮುಂಜೆ ಶಾಲಾ ವಿಶ್ರಾಂತ ಮುಖ್ಯೋಪಾಧ್ಯಾಯಿನಿ ಲೂವಿಝ ಕುಟಿನ್ನೋ,ಅಮ್ಮುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮೀ ಬೆಂಜನಪದವು,ಉಪಾಧ್ಯಕ್ಷ ರಾಧಾಕೃಷ್ಣ ತಂತ್ರಿ ಪೊಳಲಿ,ಅಮ್ಮುಂಜೆ ಅನುದಾನಿತ ಹಿ.ಪ್ರಾ.ಶಾಲೆ ಶೋಭ ಶೆಟ್ಟಿ ಅಮ್ಮುಂಜೆಗುತ್ತು,ಮುಖ್ಯೋಪಾಧ್ಯಾಯಿನಿ ಸುಗುಣ ಸಂಕಪ್ಪ ಶೆಟ್ಟಿ,ಲಯನ್ ಉಮೇಶ್ ಸಾಲಿಯಾನ್ ಬೆಂಜನ್ ಪದವು,ಉದ್ಯಮಿ ಮಹಮ್ಮದ್ ಬಟ್ಲಬೆಟ್ಟು,ತಾಲೂಕಿನ ಗೌರವ ಕಾರ್ಯದರ್ಶಿ ವಿ.ಸುಬ್ರಹ್ಮಣ್ಯ ಭಟ್,ಗೌರವ ಕೋಶಾಧಿಕಾರಿ ಅಬ್ದುಲ್ ರಹಮಾನ್,ಬಂಟ್ವಾಳ,ಜೀವರಾಜ್ ಶೆಟ್ಟಿ ಅಮ್ಮುಂಜೆ ಗುತ್ತು,ದೇವದಾಸ್ ಹೆಗ್ಡೆ ಅಮ್ಮುಂಜೆ ಗುತ್ತು ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಕಸಾಪದ ಸಂಘಟನಾ ಕಾರ್ಯದರ್ಶಿ ದಾಮೋದರ ಏರ್ಯ,ಕಾರ್ಯಕಾರಿ ಸಮಿತಿ ಸದಸ್ಯೆ ರಜನಿ ಚಿಕ್ಕಯಮಠ,ರೇಖಾ ವಿಶ್ವನಾಥ್,ಬಂಟ್ವಾಳ ಕನ್ನಡ ಭವನ ಕಟ್ಟಡ ನಿರ್ಮಾಣ ಸಮಿತಿ ಕೋಶಾಧಿಕಾರಿ ಶಿವಶಂಕರ್ ಎನ್,ಮತ್ತಿತರರು ಉಪಸ್ಥಿತರಿದ್ದ ಸಮಾರಂಭದಲ್ಲಿ ೨೨ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಸಂಚಾಲಕ ಅಬೂಬಕರ್ ಅಮ್ಮುಂಜೆ ಸ್ವಾಗತಿಸಿದರು. ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ. ಜನಾರ್ದನ ಅಮ್ಮುಂಜೆ ನಿರೂಪಿಸಿದರು.ಶಿಕ್ಷಕರಾದ ಹರೀಶ್ ರಾವ್ ವಂದಿಸಿದರು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಅಮ್ಮುಂಜೆಯಲ್ಲಿ ನಡೆದ ೨೨ನೆಯ ಬಂಟ್ವಾಳ ತಾಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನದ ದಿನಾಚರಣೆ ಸವಿನೆನಪು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*