ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಬಂಟ್ವಾಳ ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಮತ್ತು ಸಿದ್ಧಕಟ್ಟೆಯ ಸೈಂಟ್ ಪ್ಯಾಟ್ರಿಕ್ ಆಂಗ್ಲ ಮಾಧ್ಯಮ ಶಾಲೆಯ ಸಹಭಾಗಿತ್ವದಲ್ಲಿ ಸಿದ್ಧಕಟ್ಟೆಯ ಸೈಂಟ್ ಪ್ಯಾಟ್ರಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಬೆಳಗ್ಗೆ ಬಲೂನು ಹಾರಿಸುವ ಮೂಲಕ ಬಂಟ್ವಾಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಿಕ್ಷಣವನ್ನು ನಾವು ಕೇವಲ ಉದ್ಯೋಗ ಪಡೆಯಲಷ್ಟೇ ಎಂಬುದಕ್ಕೆ ಸೀಮಿತಗೊಳಿಸದೆ, ವಿಸ್ತಾರವಾಗಿ ಆಲೋಚಿಸಿ, ನಾನಾ ಪ್ರತಿಭೆಗಳನ್ನು ಹೊರತರಲು ವೇದಿಕೆಯಾಗಿಸಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿಆದರೆ ಮಕ್ಕಳಿಗೆ ತನ್ನ ಇಚ್ಛೆಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಹಾಗೂ ಭವಿಷ್ಯದಲ್ಲಿ ಮುನ್ನಡೆಯಲು ಸಹಕಾರಿಯಾಗುವುದು ನಿಶ್ಚಿತ ತಾಲೂಕು, ಜಿಲ್ಲೆಯಲ್ಲದೆ, ಹಳ್ಳಿಯಿಂದ ದೂರದ ಹೊರದೇಶದವರೊಂದಿಗೂ ಸ್ಪರ್ಧಿಸುವಷ್ಟು ಸಾಮರ್ಥ್ಯವಂತರಾಗಲು ಇಂಥ ಸ್ಪರ್ಧೆಗಳು ಮೆಟ್ಟಿಲಾಗುತ್ತವೆ ಎಂದು ಈ ಸಂದರ್ಭ ಹೇಳಿದರು.
ಅಕ್ಷರ ದಾಸೋಹದ ಅಧಿಕಾರಿ ಎಂ.ಪಿ.ಜ್ಞಾನೇಶ್ ಮಾತನಾಡಿ, ಶುಭ ಹಾರೈಸಿದರು. ಸೈಂಟ್ ಪ್ಯಾಟ್ರಿಕ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ರೆ.ಫಾ.ಡೇನಿಯಲ್ ಡಿಸೋಜ ಮಾತನಾಡಿ, ಕಾರ್ಯಕ್ರಮಕ್ಕೆ ಯಶಸ್ಸು ಕೋರಿದರು.
ಕಾರ್ಯಕ್ರಮದಲ್ಲಿ ಕುಕ್ಕಿಪ್ಪಾಡಿ ಗ್ರಾಪಂ ಅಧ್ಯಕ್ಷ ಶೇಖರ ಶೆಟ್ಟಿ ಬದ್ಯಾರು, ಸಿದ್ಧಕಟ್ಟೆ ವ್ಯ.ಸೇ.ಸ.ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಅಧ್ಯಾಪಕರ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ನಾಯಕ್ ರಾಯಿ, ಸಂಗಬೆಟ್ಟು ಗ್ರಾಪಂ ಉಪಾಧ್ಯಕ್ಷ ಸುರೇಶ್ ಕುಲಾಲ್, ಕುಕ್ಕಿಪ್ಪಾಡಿ ಗ್ರಾಪಂ ಸದಸ್ಯರದ ದಿನೇಶ್ ಸುಂದರ ಶಾಂತಿ, ಚಂದ್ರ ಕೋರ್ಯಾರು, ಸೈಂಟ್ ಪ್ಯಾಟ್ರಿಕ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಸಿಂಥಿಯಾ ಸಿಕ್ವೇರಾ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪ್ರವೀಣ್ ಕ್ರಾಸ್ತಾ, ರೋಟರಿ ಅಧ್ಯಕ್ಷ ರಾಮಚಂದ್ರ ಶೆಟ್ಟಿಗಾರ್, ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಉಮಾನಾಥ ರೈ ಮೇರಾವು, ನಾನಾ ಶಿಕ್ಷಕರ ಸಂಘಗಳ ಪದಾಧಿಕಾರಿಗಳಾದ ಶಿವಪ್ರಸಾದ್ ಶೆಟ್ಟಿ, ಜೋಯಲ್ ಲೋಬೊ, ನವೀನ್ ಪಿ.ಎಸ್, ಕಿರಣ್ ಕುಮಾರ್, ಚೆನ್ನಕೇಶವ, ರತ್ನಾವತಿ ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಬಂಟ್ವಾಳ ಕ್ಷೇತ್ರ ಸಮನ್ವಯಾಧಿಕಾರಿ ರಾಘವೇಂದ್ರ ಬಲ್ಲಾಳ್, ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸಿದರು. ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ. ಸ್ವಾಗತಿಸಿದರು.ಬಿ.ಆರ್.ಸಿಯ ಸುರೇಖಾ ಯಳವರ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಣ ಸಂಯೋಜಕರಾದ ಪ್ರತಿಮಾ ವೈ.ವಿ. ವಂದಿಸಿದರು.
Be the first to comment on "ಸಿದ್ಧಕಟ್ಟೆಯಲ್ಲಿ ಬಂಟ್ವಾಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ"