ಬಂಟ್ವಾಳ

ಭದ್ರಾ ಹೋಂ ಅಪ್ಲೈನ್ಸಸ್ 3ನೇ ವಾರ್ಷಿಕೋತ್ಸವ: ಮೆಗಾ ಮಾರಾಟ ಉತ್ಸವಕ್ಕೆ ಚಾಲನೆ

ಜಾಹೀರಾತು

VISIT BHADRA HOME APPLIANCES BASTIPADPU BANTWAL

ಬಂಟ್ವಾಳ ಬಸ್ತಿಪಡ್ಪುವಿನ ಭದ್ರಾ ಹೋಂ ಅಪ್ಲೈನ್ಸಸ್ ನ ತೃತೀಯ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಮಳಿಗೆಯಲ್ಲಿ ಶನಿವಾರ ಸಂಜೆ ಚಾಲನೆ ನೀಡಲಾಯಿತು.

ಸಂಸ್ಥೆಯ ಹಿತೈಷಿ ಸ್ವಪ್ನಾ ಹರೀಶ್ ಶೆಣೈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಹಿರಿಯರಾದ ಆಶಾಲತಾಬಾಯಿ, ಭದ್ರಾ ಹೋಂ ಅಪ್ಲೈನ್ಸಸ್ ಮಾಲಕಿ ಮೇಘಾ ಆಚಾರ್ಯ, ಗ್ರಾಹಕರಾದ ಭವ್ಯ ಪವನ್ ರಾವ್, ಗಾಯತ್ರಿ ಭಟ್ ಈ ಸಂದರ್ಭ ಉಪಸ್ಥಿತರಿದ್ದರು.

ಜಾಹೀರಾತು

ನವೆಂಬರ್ 4ರಿಂದ 15ರವರೆಗೆ ದೀಪಾವಳಿ ಮತ್ತು 3ನೇ ವಾರ್ಷಿಕೋತ್ಸವ ಪ್ರಯುಕ್ತ ಭರ್ಜರಿ ಆಫರ್ ಗಳನ್ನು ಒಳಗೊಂಡ ಈ ವರ್ಷದ ಅತಿ ದೊಡ್ಡ ಸೇಲ್ ಇದಾಗಿದೆ ಎಂದು ಕಾರ್ಯಕ್ರಮ ನಿರ್ವಹಿಸಿದ ಭದ್ರಾ ಸಮೂಹ ಸಂಸ್ಥೆಗಳ ಮಾಲೀಕರಾದ ಮಂಜುನಾಥ ಆಚಾರ್ಯ ಈ ಸಂದರ್ಭ ತಿಳಿಸಿದರು.  ಭದ್ರಾ ಸಮೂಹ ಸಂಸ್ಥೆಗಳ  ಮುಖ್ಯಸ್ಥರೂ ಹಿರಿಯರೂ ಆಗಿರುವ ವರದ ಆಚಾರ್ಯ, ಆಶಾಲತಾಬಾಯಿ ದಂಪತಿ ಈ ಸಂದರ್ಭ ಉಪಸ್ಥಿತರಿದ್ದು, ಶುಭ ಹಾರೈಸಿದರು. ಈ ಸಂದರ್ಭ ಮೊದಲ ಗ್ರಾಹಕರಿಗೆ ಆಕರ್ಷಕ ಉಡುಗೊರೆ ವಿತರಿಸಲಾಯಿತು. ವಿವಿಧ ಬ್ರಾಂಡ್ ಗಳ ಎಲೆಕ್ಟ್ರಾನಿಕ್ಸ್ ಹಾಗೂ ಫರ್ನೀಚರ್ ಉತ್ಪನ್ನಗಳ ವಿಶೇಷ ಪ್ರದರ್ಶನ ಮತ್ತು ಮಾರಾಟ, ಪ್ರತಿ ಖರೀದಿಗೂ ಖಚಿತ ಉಡುಗೊರೆ, ಕ್ಯಾಷ್ ಬ್ಯಾಕ್ ವೋಚರ್, ಫುಡ್ ಫೆಸ್ಟಿವಲ್, ಉಚಿತ ಸರ್ವೀಸ್ ಕ್ಯಾಂಪ್, ಇಎಂಐ ಮೇಳ ಹಾಗೂ ವಿಜಯ ಕರ್ನಾಟಕದ ದೀಪೋತ್ಸವ ಹಿನ್ನೆಲೆಯಲ್ಲಿ ಖರೀದಿಗೆ ಹಲವು ಆಕರ್ಷಕ ಬಹುಮಾನಗಳು ಇಲ್ಲಿವೆ ಎಂದು ಮಂಜುನಾಥ ಆಚಾರ್ಯ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts