ಭಾನುವಾರ ಸಂಜೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದಿಂದ ಧರ್ಮಸ್ಥಳದವರೆಗೆ ನಡೆಯುವ ಪಾದಯಾತ್ರೆ ಹಿನ್ನೆಲೆಯಲ್ಲಿ ಧರ್ಮಸಂರಕ್ಷಣಾ ರಥಯಾತ್ರೆ ಮಂಗಳೂರಿನಿಂದ ಹೊರಟು ಉಜಿರೆಯವರೆಗೆ ನಾನಾ ಕಡೆಗಳಲ್ಲಿ ಸಾಗಿತು. ಯಾತ್ರೆ ಕದ್ರಿಯಿಂದ ಆರಂಭಗೊಂಡು, ಅರ್ಕುಳದಲ್ಲಿ ಅಭೂತಪೂರ್ವ ಸ್ವಾಗತ ದೊರಕಿತು. ಬೆಳಗ್ಗೆ ಬಂಟ್ವಾಳಕ್ಕೆ ಆಗಮಿಸಿದ ಯಾತ್ರೆಗೆ ಬಿ.ಸಿ.ರೋಡ್ ಫ್ಲೈಓವರ್ ಬಳಿ ಅಭಿಮಾನಿಗಳು ಸ್ವಾಗತಿಸಿದರು.
ಮಂಗಳೂರಿನಿಂದ ಹೊರಟ ಯಾತ್ರೆ ಬಿ.ಸಿ.ರೋಡಿಗೆ ಬೆಳಗ್ಗೆ 9.45ಕ್ಕೆ ತಲುಪಿತು. ಈ ಸಂದರ್ಭ ಮಹಿಳೆಯರು ಆರತಿ ಎತ್ತಿ ರಥವನ್ನು ಸ್ವಾಗತಿಸಿದರು. ಮಂಜುನಾಥಸ್ವಾಮಿಯ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭ ತುಳುಕೂಟ ಅಧ್ಯಕ್ಷ ಸುದರ್ಶನ ಜೈನ್, ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಕೈಯೂರು ನಾರಾಯಣ ಭಟ್, ಜಿಪಂ ಮಾಜಿ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಪದ್ಮಶೇಖರ ಜೈನ್, ಸೇವಾಂಜಲಿ ಆಡಳಿತ ಟ್ರಸ್ಟಿ ಕೃಷ್ಣಕುಮಾರ ಪೂಂಜಾ ಫರಂಗಿಪೇಟೆ, ಯೋಜನೆಯ ಉಡುಪಿ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ದ.ಕ. ನಿರ್ದೇಶಕ ಮಹಾಬಲ ಕುಲಾಲ್, ಬಂಟ್ವಾಳ ಯೋಜನಾಧಿಕಾರಿ ಮಾಧವ ಗೌಡ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜೈನ್ ಮಿಲನ್ ಪ್ರಮುಖರು, ಹಾಗೂ ನಾನಾ ಸಂಘ, ಸಂಸ್ಥೆಗಳ ಪ್ರಮುಖರಾದ ಶೇಖರ ಸಾಮಾನಿ, ಸದಾನಂದ ಗೌಡ, ದೀಪಕ್ ಕುಮಾರ್ ಜೈನ್, ಸುಭಾಶ್ಚಂದ್ರ ಜೈನ್, ಡಾ. ಸುದೀಪ್, ಹರ್ಷರಾಜ್ ಬಲ್ಲಾಳ್, ರಾಜೇಂದ್ರ ಜೈನ್ ಶಿವಶಂಕರ್ ಕೈಕುಂಜೆ, ಶಾಮಸುದರ್ಶನ ಭಟ್ ಹೊಸಮೂಲೆ ಸಹಿತ ಪ್ರಮುಖರು ಉಪಸ್ಥಿತರಿದ್ದು, ಯಾತ್ರೆಯನ್ನು ಸ್ವಾಗತಿಸಿದರು.
Be the first to comment on "ಬಂಟ್ವಾಳದಲ್ಲಿ ಧರ್ಮಸಂರಕ್ಷಣಾ ಯಾತ್ರೆಗೆ ಸ್ವಾಗತ"