ಬಂಟ್ವಾಳ: ಬಂಟ್ವಾಳ: ತಾಲೂಕು ಆಡಳಿತ ತಾಲೂಕು ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ, ಬಂಟ್ವಾಳ ತಾಲೂಕು ಆಶ್ರಯದೊಂದಿಗೆ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ನಡೆಯಿತು.
ಬಂಟ್ವಾಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಜಗತ್ತಿಗೆ ಉತ್ತಮ ಸಂದೇಶ ನೀಡುವ ರಾಮಾಯಣವನ್ನು ರಚಿಸಿದ ವಾಲ್ಮೀಕಿ ಮಹರ್ಷಿ, ರತ್ನಾಕರನಿಂದ ವಾಲ್ಮೀಕಿಯಾದ ಬಗೆಯನ್ನು ತಿಳಿಸಿ, ಜಗತ್ತಿನ ಆದಿಕವಿ ಎನಿಸಿಕೊಂಡಿದ್ದಾರೆ ಎಂದರು.
ಉಪನ್ಯಾಸ ನೀಡಿದ ತುಂಬೆ ಪದವಿಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ದಿನೇಶ್ ಶೆಟ್ಟಿ ಮಾತನಾಡಿ, ಕರ್ನಾಟಕದಲ್ಲಿ ಇವತ್ತು ವಾಲ್ಮೀಕಿಯನ್ನು ಆರಾಧಿಸುವುದರ ಜೊತೆಗೆ ರಾಮನ ಉಪಾಸನೆಯನ್ನು ಮಾಡುತ್ತಾರೆ. ವ್ಯಾಧ ಕುಲಕ್ಕೆ ಸೇರಿದ ಮಹಾನ್ ವ್ಯಕ್ತಿಗಳು ಪುರಾಣ ಮತ್ತು ಇತಿಹಾಸದಲ್ಲಿ ಕಂಡುಬಂದಿದ್ದು, ಆದರ್ಶಪ್ರಾಯವಾಗಿ ಮೆರೆದಿದ್ದಾರೆ ಎಂದರು.
ಬಂಟ್ವಾಳ ತಹಸೀಲ್ದಾರ್ ಎಸ್.ಬಿ.ಕೂಡಲಗಿ ವಾಲ್ಮೀಕಿ ಮಹರ್ಷಿ ಕುರಿತು ಮಾತನಾಡಿದರು.ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸುನೀತಾ ಕುಮಾರಿ, ತಾಪಂ ಸಹಾಯಕ ನಿರ್ದೇಶಕ ದಿನೇಶ್ ಉಪಸ್ಥಿತರಿದ್ದರು. ಪ್ರದೀಪ್ ಎನ್. ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಬಂಟ್ವಾಳದಲ್ಲಿ ತಾಲೂಕು ಮಟ್ಟದ ವಾಲ್ಮೀಕಿ ಜಯಂತಿ ಆಚರಣೆ"