ROTARY CLUB BANTWAL ರೋಟರಿ ಕ್ಲಬ್ ಬಂಟ್ವಾಳದಿಂದ ಶೀಘ್ರ ಬ್ಲಡ್ ಬ್ಯಾಂಕ್ ಸ್ಥಾಪನೆಯಾಗಲಿದ್ದು, ಇದೊಂದು ಶ್ಲಾಘನೀಯ ಕಾರ್ಯವಾಗಿದೆ ಎಂದು ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ಎಚ್.ಆರ್. ಕೇಶವ್ ಹೇಳಿದರು.
ಶುಕ್ರವಾರ ಕ್ಲಬ್ ಗೆ ಅಧಿಕೃತ ಭೇಟಿ ನೀಡಿದ ಸಂದರ್ಭ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಕಣ್ಣಿನ ಆಸ್ಪತ್ರೆಯನ್ನು ತೆರೆಯುವ ಯೋಜನೆಯೂ ಇದೆ ಎಂದು ಹೇಳಿದ ಅವರು, ರೋಟರಿ ಕ್ಲಬ್ ಈ ಬಾರಿ ಅಂಗನವಾಡಿಗಳ ಅಭಿವೃದ್ಧಿ, ಮಳೆಕೊಯ್ಲು ಹಾಗೂ ಹದಿಹರೆಯದವರಲ್ಲಿ ಮಾನಸಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ, ಪೋಲಿಯೊ ನಿರ್ಮೂಲನೆಗೆ ಮಹತ್ತರವಾದ ಕೆಲಸ ಮಾಡಿದ್ದ ರೋಟರಿ ಅಂಥದ್ದೇ ಕೆಲಸಗಳನ್ನು ಸಮಾಜಸೇವಾ ಚಟುವಟಿಕೆಗಳ ಮೂಲಕ ಮಾಡುತ್ತಿದ್ದು, ಇದಕ್ಕೆ ಬಂಟ್ವಾಳ ರೋಟರಿ ಕ್ಲಬ್ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದರು.
ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಬಿ. ಪ್ರಕಾಶ್ ಬಾಳಿಗಾ ಮಾತನಾಡಿ, ರಕ್ತನಿಧಿ (ಬ್ಲಡ್ ಬ್ಯಾಂಕ್)ಯನ್ನು ನಮ್ಮ ಕ್ಲಬ್ ವತಿಯಿಂದ ಸುಮಾರು 75 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಕೆಲಸ ಭರದಿಂದ ಸಾಗಿದೆ, ಮುಂದಿನ ಫೆಬ್ರವರಿಯಲ್ಲಿ ಇದು ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ ಎಂದರು.
ಈ ಸಂದರ್ಭ ಹಿರಿಯ ರೊಟೇರಿಯನ್ ಗಳಾದ ನಾರಾಯಣ ಹೆಗ್ಡೆ, ಕಾರ್ಯನಿರ್ವಾಹಕ ಕಾರ್ಯದರ್ಶಿ ರಿತೇಶ್ ಬಾಳಿಗಾ, ರೋಟರಿ ಕ್ಲಬ್ ಬಂಟ್ವಾಳ ಕಾರ್ಯದರ್ಶಿ ಬಿ.ಸದಾಶಿವ ಬಾಳಿಗಾ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ರೋಟರಿ ಕ್ಲಬ್ ಬಂಟ್ವಾಳದಿಂದ ಶೀಘ್ರ ಬ್ಲಡ್ ಬ್ಯಾಂಕ್ ಸ್ಥಾಪನೆ"