ಪಂಜಿಕಲ್ಲು ಬುಡೋಳಿಯಲ್ಲಿ ಬಿ.ಮೂಡ ಸರಕಾರಿ ಪದವಿಪೂರ್ವ ಕಾಲೇಜಿನ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ ಆರಂಭಗೊಂಡಿತು.
ಬುಡೋಳಿ ನೇತಾಜಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಬಿರವನ್ನು ದೀಪ ಬೆಳಗಿಸಿ ಕರಿಮಲೆಯ ಬಾಲಯೇಸು ದೇವಾಲಯದ ಧರ್ಮಗುರು ರೆ.ಫಾ.ಕಿರಣ್ ಪಿಂಟೊ ಉದ್ಘಾಟಿಸಿದರು. ವೈವಿಧ್ಯಮಯವಾದ ಮನೋಧರ್ಮದ ಜನರು ಒಟ್ಟು ಸೇರಿ ಸುಸಂಸ್ಕೃತ ಸಮಾಜ ಜೀವನ ನಡೆಸಲು ಎನ್ನೆಸ್ಸೆಸ್ ಶಿಬಿರದ ಚಟುವಟಿಕೆಗಳು ಮಾರ್ಗದರ್ಶಕವಾಗಿವೆ. ವಿದ್ಯಾರ್ಥಿಗಳು ಇದರ ಗರಿಷ್ಠ ಪ್ರಯೋಜನ ಪಡೆದುಕೊಂಡು ಉತ್ತಮ ನಾಗರಿಕರಾಗಬೇಕೆಂದು ಹೇಳಿದರು.
ಪಂಜಿಕಲ್ಲು ಗ್ರಾಮ ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರಸಾದ್ ಗಾಣಿಗ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮಾಜಿ ನಿರ್ದೇಶಕಿ ಸುಲೋಚನ ಜಿ.ಕೆ ಭಟ್, ಧಾರ್ಮಿಕ ಮುಂದಾಳು ಸೂರ್ಯನಾರಾಯಣ ಭಟ್ ಕಶೆಕೋಡಿ, ಶಿಕ್ಷಣ ಸಂಯೋಜಕಿ ಸುಜಾತ ಕುಮಾರಿ, ನೇತಾಜಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ಮಾಜಿ ಸಂಚಾಲಕ ಶ್ರೀಪತಿ ಭಟ್, ಈಗಿನ ಸಂಚಾಲಕರಾದ ಧರ್ಮೇಂದ್ರ, ಅಧ್ಯಕ್ಷ ಸಿಲ್ವೆಸ್ಟರ್ ಫೆರ್ನಾಂಡಿಸ್, ಕಾರ್ಯದರ್ಶಿ ದೇವಪ್ಪ ಕುಲಾಲ್, ಗೌರವಾಧ್ಯಕ್ಷ ಪ್ರಕಾಶ್ ಕುಮಾರ್ ಜೈನ್, ಕೋಶಾಧಿಕಾರಿ ಕೇಶವ ಪೂಜಾರಿ, ಟ್ರಸ್ಟಿ ಜಯ ಕುಂದರ್, ಮುಖ್ಯ ಶಿಕ್ಷಕ ದೊಡ್ಡಪ್ಪ ಎಚ್, ಬಿ.ಮೂಡ ಪ.ಪೂ. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ರಜನಿ ಚಿಕ್ಕಯ್ಯಮಠ, ಸದಸ್ಯರಾದ ಶ್ರೀನಿವಾಸ ಪೂಜಾರಿ ಮೆಲ್ಕಾರ್ ಮತ್ತು ಯಶೋದ, ಪ್ರಿನ್ಸಿಪಾಲ್ ಯೂಸುಫ್ ವಿಟ್ಲ ಶಿಬಿರಕ್ಕೆ ಶುಭ ಹಾರೈಸಿದರು.
ಶಿಬಿರಾಧಿಕಾರಿ ಬಾಲಕೃಷ್ಣ ನಾಯ್ಕ್ ಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದೇವಪ್ಪ ಕುಲಾಲ್ ಸ್ವಾಗತಿಸಿದರು. ಸಹಶಿಬಿರಾಧಿಕಾರಿ ಅಬ್ದುಲ್ ರಝಾಕ್ ಕಾರ್ಯಕ್ರಮ ನಿರೂಪಿಸಿದರು. ದಾಮೋದರ.ಇ ವಂದಿಸಿದರು. ಉಪನ್ಯಾಸಕರಾದ ಸೂರಜ್ ಬಿ.ಎಸ್, ಲವೀನ ಶಾಂತಿ ಲೋಬೋ,ದಿವ್ಯ ವಿ, ಹರ್ಷಿತಾ ಎಚ್, ಲಕ್ಷ್ಮೀ ಆಚಾರ್ಯ, ಸವಿತಾ, ರಾಧಾ, ಭಾರತಿ,ಲವ್ಯಶ್ರೀ ಕಾರ್ಯಕ್ರಮಕ್ಕೆ ಸಹಕರಿಸಿದರು.
Be the first to comment on "ಪಂಜಿಕಲ್ಲು: ಬಿ.ಮೂಡ ಸರಕಾರಿ ಪಪೂ ಕಾಲೇಜು ಎನ್ನೆಸ್ಸೆಸ್ ಶಿಬಿರ ಆರಂಭ"