ಶಂಭುಗ ಬಾಲಮಂಟಮೆಯಲ್ಲಿ ಅರಸು ಶ್ರೀ ಗುಡ್ಡೆಚಾಮುಂಡಿ, ಪ್ರಧಾನಿ ಶ್ರೀಪಂಜುರ್ಲಿ, ಬಂಟೆದಿ ಶ್ರೀ ಮಲೆಕೊರತಿ ದೈವಗಳ ಕಾಲಾವಧಿ ನವರಾತ್ರಿ ನೇಮ ಅ. 22 ರಂದು ನಡೆಯಲಿದೆ.
ನವರಾತ್ರಿ ನೇಮದ ಭರದ ಸಿದ್ಧತೆ ನಡೆಯುತ್ತಿದೆ. ಅ.15 ರಂದು ಬೆಳಗ್ಗೆ 11 ಗಂಟೆಗೆ ಕಲಶ, ಗಣಹೋಮ ಹಾಗೂ ಗೊನೆ ಕಡಿಯುವುದು. ಸಂಜೆ ಆರು ಗಂಟೆಗೆ ನವರಾತ್ರಿ ಪೂಜೆ ಆರಂಭ ಅಗಲಿದೆ ಅ. 22ರಂದು ಸಂಜೆ ನಾಲ್ಕು ಗಂಟೆಗೆ ಮಾಣಿ ಗುತ್ತಿನಿಂದ ಭಂಢಾರ ಹೊರಟು ಐದು ಗಂಟೆಗೆ ಶಂಭುಗ ಬಾಲಮಂಟಮೆಗೆ ಆಗಮಿಸಲಿದೆ.ಭಂಡಾರಯೇರಿ ನವರಾತ್ರಿ ಪೂಜೆಯ ಬಳಿಕ ಅನ್ನಸಂತಪರ್ಣೆ ಬಳಿಕ ಹತ್ತು ಗಂಟೆಗೆ ದೈವಗಳ ನೇಮ ಜರಗಲಿದೆ. ಮರುದಿನ ಬೆಳಿಗ್ಗೆ ಆರು ಗಂಟೆಗೆ ನವರಾತ್ರಿ ಪೂಜೆ ಜರಗಲಿದೆ. ಎಂಟು ಗಂಟೆಗೆ ಭಂಡಾರ ನಿರ್ಗಮಿಸಲಿದೆ ಎಂದು ಶ್ರೀ ಗುಡ್ಡೆಚಾಮುಂಡಿ ಸೇವಾ ಸಮಿತಿಯ ಪ್ರಕಟಣೆ ತಿಳಿಸಿದೆ.
Be the first to comment on "ಅ. 22: ಶಂಭುಗ ದೈವಸ್ಥಾನದಲ್ಲಿ ನವರಾತ್ರಿ ನೇಮ"