ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ರೈಲ್ವೇ ನಿಲ್ದಾಣದಲ್ಲಿ ಕಾಮಗಾರಿ ನಿರ್ವಹಿಸುತ್ತಿದ್ದ ಕಾಂಕ್ರೀಟ್ ಮಿಕ್ಸರ್ ಯಂತ್ರವೊಂದನ್ನು ಒಳಗೊಂಡ ವಾಹನ ಚಾಲಕನ ನಿಯಂತ್ರಣ ತಪ್ಪಿ ಪ್ಲಾಟ್ ಪಾರ್ಮ್ ನಿಂದ ಕೆಳಗೆ ರೈಲ್ವೇ ಹಳಿಗೆ ಉರುಳಿ ಬಿದ್ದ ಘಟನೆ ನಡೆದಿದೆ.
ಘಟನೆಯಿಂದ ಯಾವುದೇ ಪ್ರಾಣಾಪಾಯ ಅಗಿಲ್ಲ. ರೈಲು ಆಗಮಿಸುವ ಮೊದಲು ಯಂತ್ರವನ್ನು ತೆರವು ಗೊಳಿಸಬೇಕಾದ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನ ಗಜಲಕ್ಷ್ಮೀ ಕ್ರೇನ್ ಮಾಲೀಕ ರಾಘವೇಂದ್ರ ಪ್ರಭು ನೇತೃತ್ವದಲ್ಲಿ ತಂಡ ರಾತ್ರಿವರೆಗೂ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನೆ ಸಂದರ್ಭ ಯಾವುದೇ ರೈಲುಗಳಾಗಲೀ, ಮನುಷ್ಯರ ಸಂಚಾರವಾಗಲೀ ಅಲ್ಲಿಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿಹೋಗಿದೆ. ಆದರೆ ಮಿಕ್ಸರ್ ಯಂತ್ರದ ವಾಹನದ ಚಾಲಕ ಗಾಯಗೊಂಡಿದ್ದಾರೆ. ಎರಡನೇ ಪ್ಲಾಟ್ ಫಾರ್ಮ್ ನಲ್ಲ ಬರಬೇಕಾದ ರೈಲುಗಳನ್ನು ಮಧ್ಯದ ಪ್ಲಾಟ್ ಫಾರ್ಮ್ ಗೆ ವರ್ಗಾಯಿಸಲಾಯಿತು. ಚಿತ್ರಗಳು ಇಲ್ಲಿವೆ.
Be the first to comment on "ಕಾಮಗಾರಿ ಸಂದರ್ಭ ರೈಲ್ವೆ ಹಳಿಗೆ ಉರುಳಿದ ಸಿಮೆಂಟ್ ಮಿಕ್ಸರ್ ಯಂತ್ರದ ವಾಹನ: ತಪ್ಪಿದ ಅನಾಹುತ"