ಮಂಗಳೂರಿನ ಜರ್ನಿ ಥೇಟರ್ ಗ್ರೂಪ್ ಪ್ರಸ್ತುತಪಡಿಸುವ ರಂಗಸಂಗೀತ ಹಾಗೂ ಜನಪದ ಗೀತೆಗಳು ಕಾರ್ಯಕ್ರಮ ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ‘ಅಭಿರುಚಿ’ ಜೋಡುಮಾರ್ಗ ವತಿಯಿಂದ ಏರ್ಪಡಿಸಲಾಯಿತು.
ಜಾಹೀರಾತು
ಕನ್ನಡದ ಹವ್ಯಾಸಿ ನಾಟಕಗಳಿಂದ ಆಯ್ದ ಗೀತೆಗಳನ್ನು ಪ್ರಸ್ತುತಪಡಿಸಲಾಯಿತು. 1970ರ ದಶಕದಲ್ಲಿ ಪ್ರದರ್ಶನಗೊಂಡ ‘ಹಯ ವದನ’ ನಾಟಕದ ‘ಗಜವದನ ಹೇರಂಭ’ ರಿಂದ ತೊಡಗಿದ ಕಾರ್ಯಕ್ರಮ ನಿನಗೆ ನೀನೇ ಗೆಳತಿ ‘ ,ಪಂಜರ ಶಾಲೆ ‘,ಹುತ್ತವ ಬಡಿದರೆ ‘, ಚಿತ್ರಪಟ ರಾಮಾಯಣ ‘, ನವೀನ ಸದಾರಮೆ’, ಗೋಕುಲ ನಿರ್ಗಮನ’, ‘ಅಗ್ನಿವರ್ಣ’ ಮುಂತಾದ ನಾಟಕಗಳಿಂದ ಆಯ್ದ ಗೀತೆಗಳನ್ನು ಹಾಡಲಾಯಿತು. ಆಧುನಿಕ ಕನ್ನಡ ರಂಗಭೂಮಿ ನಡೆದು ಬಂದ ದಾರಿಯನ್ನೂ ನೆನಪಿಸಿದ ಕಾರ್ಯಕ್ರಮದಲ್ಲಿ ರಂಗ ಸಂಗೀತ ಕ್ಷೇತ್ರಕ್ಕೆ ‘ರಂಗ ಜಂಗಮ’ ಎಂದೇ ಖ್ಯಾತರಾದ ಬಿ.ವಿ.ಕಾರಂತರು ನೀಡಿದ ಹೊಸ ಆಯಾಮ,ಮಹತ್ತರ ಕೊಡುಗೆಯನ್ನು ನೆನೆಯುವಂತೆ ಮಾಡಿತು ಕವಿ ರಾಧೇಶ ತೋಳ್ಪಾಡಿ ಪ್ರಸ್ತಾವನೆಯ ಮಾತುಗಳೊಂದಿಗೆ ಸ್ವಾಗತಿಸಿದರು. ಪ್ರಾಧ್ಯಾಪಕ ಚೇತನ್ ಮುಂಡಾಜೆ ವಂದಿಸಿದರು.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಬಂಟ್ವಾಳದಲ್ಲಿ ರಂಗ ಸಂಗೀತ ಕಾರ್ಯಕ್ರಮ"
Be the first to comment on "ಬಂಟ್ವಾಳದಲ್ಲಿ ರಂಗ ಸಂಗೀತ ಕಾರ್ಯಕ್ರಮ"