ಕರ್ನಾಟಕ ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೈವಸ್ಥಾನ ದೇವಸ್ಥಾನಗಳು ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಹಾಗು ವರ್ಷಂಪ್ರತಿ ನಡೆಯುತ್ತಿರುವಂತ ಜಾತ್ರಾ ಮಹೋತ್ಸವಗಳು ಬ್ರಹ್ಮಕಲಶೋತ್ಸವಗಳು ನೇಮೋತ್ಸವಗಳು ಹಾಗೂ ಸನಾತನ ಹಿಂದೂ ಧರ್ಮದ ಯಾವುದೇ ಉತ್ಸವದ ಕಾರ್ಯಕ್ರಮಗಳಲ್ಲಿ ಅನ್ಯಧರ್ಮಿಯರಿಗೆ ಅವಕಾಶ ನೀಡದೆ ಸನಾತನ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದ ಎಲ್ಲ ವ್ಯಾಪಾರಸ್ಥರಿಗೆ ಅವಕಾಶ ಮಾಡಿಕೊಡಬೇಕಾಗಿ ಸನಾತನ ಹಿಂದೂ ಜಾತ್ರಾ ವ್ಯಾಪಾರಸ್ಥರ ದಕ್ಷಿಣ ಕನ್ನಡ ಜಿಲ್ಲಾ ಸಂಘಟನೆ ಮನವಿ ಮಾಡಿದೆ.
ಮಂಗಳೂರಲ್ಲಿ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಈ ಮನವಿ ಅರ್ಪಿಸಿದೆ.ಹರಾಜು ಪ್ರಕ್ರಿಯೆ ಸಂದರ್ಭ ನೇರ ಆಡಳಿತ ಮಂಡಳಿ ಹಾಗು ಧಾರ್ಮಿಕ ಇಲಾಖೆ ಅಧಿಕಾರಿಗಳು ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಕಡಿಮೆ ದರದಲ್ಲಿ ವ್ಯಾಪಾರಸ್ಥರಿಗೆ ಅವಕಾಶ ಮಾಡಿಕೊಡಬೇಕೆಂದು ವಿನಂತಿಸಿದರು. ಜಾತ್ರೆ ಮುಗಿದ ಬಳಿಕ ಸ್ವಚ್ಛತಾ ಕಾರ್ಯಕ್ಕೆ ಎಲ್ಲರೂ ಆಡಳಿತ ಮಂಡಳಿಯೊಂದಿಗೆ ಕೈಜೋಡಿಸುತ್ತೇವೆ ಎಂದುದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಹಾಗೂ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ದಿನೇಶ್ ಆಮ್ಟೂರು, ಸನಾತನ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಯರಾಮ್ ಶೆಟ್ಟಿಗಾರ್ ಕಲ್ಲಡ್ಕ, ಗೌರವಾಧ್ಯಕ್ಷ ರವೀಂದ್ರನಾಥ್ ಮನವಿ ನೀಡಿ ವಿನಂತಿಸಿದರು. ಪದಾಧಿಕಾರಿಗಳಾದ ಪ್ರಸಾದ್ ಆರ್ ಶಂಭೂರು, ಧನು ಕುಂಡಡ್ಕ, ರಾಜೇಂದ್ರ ಕೋಟ್ಯಾನ್ ಬೆಳ್ತಂಗಡಿ, ಸತೀಶ್ ಬಂಗೇರ ತುಂಬೆ, ಶಶಿ ಉಜಿರೆ, ಸತೀಶ್ ಪಾಣೆಮಂಗಳೂರು, ಜಗದೀಶ್ ದಾಸ್ ಮಡಂತ್ಯಾರ್, ಪ್ರದೀಪ್ ದಾಸ್, ಸುರೇಂದ್ರ ಭಂಡಾರಿ, ಮೂಲ್ಕಿ ಚರಣ್ ತೊಕ್ಕೋಟ್ಟು, ಪ್ರಾಣೇಶ್ ಜಪ್ಪಿನ ಮುಗೇರು, ಹಾಗು ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು
Be the first to comment on "ಜಾತ್ರೆ ಸಂದರ್ಭ ಹಿಂದು ವ್ಯಾಪಾರಸ್ಥರಿಗೆ ಅವಕಾಶ: ಸಂಘಟನೆ ಮನವಿ"