ಸೆಪ್ಟಂಬರ್ 27 ನವೆಂಬರ್ 4ರ ತನಕ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ ಭಜನಾ ಕಮಟದ ಬಗ್ಗೆ ಬಂಟ್ವಾಳ ಹಾಗೂ ವಿಟ್ಲ ಯೋಜನಾ ಕಚೇರಿ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಭಜನಾ ಪರಿಷತ್ ಸಭೆಯು ಬಂಟ್ವಾಳ ಯೋಜನಾ ಕಚೇರಿಯ ಉನ್ನತಿ ಸೌಧದಲ್ಲಿ ಜರಗಿತು.
ಪ್ರಾದೇಶಿಕ ನಿರ್ದೇಶಕರಾದ ಪುರುಷೋತ್ತಮ ಪಿ ಕೆ ದೀಪ ಬೆಳಗಿಸಿ ಸಭೆಯನ್ನುಉದ್ಘಾಟಿಸಿ ಧರ್ಮಸ್ಥಳದಲ್ಲಿ ನಡೆಯುವ ಭಜನಾ ಕಮ್ಮಟದ ಬಗ್ಗೆ ಹಾಗು ಭಜನಾ ಪರಿಷತ್ತಿನ ಬಲವರ್ಧನೆಯ ಕುರಿತು ಮಾಹಿತಿ ನೀಡಿದರು. ಈ ಸಂದರ್ಭ ಭಜನಾ ಪರಿಷತ್ ಬಂಟ್ವಾಳ ತಾಲೂಕು ಅಧ್ಯಕ್ಷರಾದ ದಿನೇಶ್ ಎಂ, ಬಂಟ್ವಾಳ ತಾಲೂಕು ಯೋಜನಾಧಿಕಾರಿಗಳಾದ ಮಾಧವ ಗೌಡ, ಭಜನಾ ಪರಿಷತ್ ಕಾರ್ಯದರ್ಶಿ ಮುರಳಿ ಹಾಗು ತಾಲೂಕಿನ ಭಜನಾ ಮಂಡಳಿಯ ಅಧ್ಯಕ್ಷರುಗಳು, ಕಾರ್ಯದರ್ಶಿಗಳು ಕಾರ್ಯದರ್ಶಿ ಉಪಸ್ಥಿತರಿದ್ದರು’.
Be the first to comment on "ಬಂಟ್ವಾಳ ತಾಲೂಕು ಭಜನಾ ಪರಿಷತ್ ಸಭೆ"