ಬಂಟ್ವಾಳ ತಾಲೂಕಿನ ವಿಟ್ಲದಲ್ಲಿರುವ ಸರಕಾರಿ ಪ್ರೌಢಶಾಲೆಗೆ ಕಿಡಿಗೇಡಿಗಳು ಅಕ್ರಮ ಪ್ರವೇಶ ಮಾಡಿ, ಶಾಲಾ ಸೊತ್ತುಗಳಿಗೆ ಹಾನಿ ಮಾಡಿ, ಗೋಡೆಯ ಮೇಲೆ ಅಶ್ಲೀಲ ಪದ ಬರೆದಿರುವ ಕುರಿತು ವಿಟ್ಲ ಪೊಲೀಸರಿಗೆ ದೂರು ನೀಡಲಾಗಿದೆ.
ಸೋಮವಾರ ಬೆಳಗ್ಗೆ ಶಾಲೆಗೆ ಬಂದು ನೋಡಿದಾಗ ಎಲ್ಲ ತರಗತಿಗಳ ಕೋಣೆಗಳ ಬಾಗಿಲಿಗೆ ಮೊಟ್ಟೆ ಒಡೆದು, ಒಂದು ತರಗತಿ ಕೋಣೆಯ ಕಿಟಕಿಯ ಗಾಜನ್ನು ಒಡೆದು ಹಾಕಿದ್ದಲ್ಲದೆ, ಮಕ್ಕಳ ಸೃಜನಾತ್ಮಕತೆಗೆ ಒದಗಿಸಿದ ಸೂಚನಾ ಫಲಕ, ಗಾಜನ್ನು ಒಡೆದಿದ್ದಾರೆ. ಅಲ್ಲದೆ, ವಿದ್ಯಾರ್ಥಿಗಳು ಬರೆದ ಚಿತ್ರಗಳನ್ನು ಹರಿದು ಬಿಸಾಡಿದ್ದಾರೆ. ಗೋಡೆ ಮೇಲೆ ಅಶ್ಲೀಲ ಪದ ಬರೆದಿದ್ದಲ್ಲದೆ, ಟ್ಯೂಬ್ ಲೈಟ್ ಗಳನ್ನೂ ಒಡೆದು ಹಾಕಿದ್ದಾರೆ. ಪ್ರಾಥಮಿಕ ಶಾಲೆಯ ಗೇಟ್ ಮತ್ತು ಅಡುಗೆ ಕೋಣೆಯ ಬಾಗಿಲನ್ನು ಹಾಳು ಮಾಡಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ದಾನಿಗಳ ಸಹಾಯದಿಂದ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಮಾಡಿದ ಆಸ್ತಿಯನ್ನು ಹಾಳುಮಾಡಿರುವುದರಿಂದ ಶಾಲೆಯ ದೈನಂದಿನ ಚಟುವಟಿಕೆಗಳಿಗೆ ತೊಂದರೆಯಾಗಿದ್ದು, ಈ ಕುರಿತು ಕ್ರಮ ಕೈಗೊಳ್ಳುವಂತೆ ವಿಟ್ಲ ಠಾಣೆಗೆ ದೂರು ನೀಡಲಾಗಿದೆ.
Be the first to comment on "ವಿಟ್ಲ ಸರಕಾರಿ ಶಾಲೆಗೆ ಅಕ್ರಮವಾಗಿ ಪ್ರವೇಶಿಸಿ ಸೊತ್ತುಗಳಿಗೆ ಹಾನಿ"