ತಮಿಳುನಾಡು ಸಿಎಂ ಪುತ್ರ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಕುರಿತು ನೀಡಿದ ಹೇಳಿಕೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಯಾಗುತ್ತಿದ್ದು, ದೇಶದಾದ್ಯಂತ ಹಿಂದು ಸಂಘಟನೆಗಳು, ಸಂತರಿಂದ ಖಂಡನೆ ವ್ಯಕ್ತವಾಗುತ್ತಿದೆ.
ಭಾರತದ ಮಣ್ಣಿನಲ್ಲಿ ಬದುಕು ಕಟ್ಟಿಕೊಂಡಿರುವ ರಾಜಕಾರಣಿ ಉದಯನಿಧಿ ಸನಾತನ ಧರ್ಮದ ಬಗ್ಗೆ ವಿಕೃತ ಹೇಳಿಕೆ ನೀಡಿರುವುದು ಶೋಚನೀಯ ವಿಚಾರ. ವಿಶ್ವಕ್ಕೆ ಮಾದರಿಯಾದ, ಸಹಸ್ರ ವರ್ಷಗಳ ಹಿಂದಿನ ಸಂಸ್ಕೃತಿಯ ಸನಾತನ ಧರ್ಮ ವಿಶ್ವಮಾನ್ಯವಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ತೀವ್ರವಾಗಿ ಖಂಡಿಸಿದ್ದಾರೆ.
ಈ ಮಧ್ಯೆ ಬಂಟ್ವಾಳದ ಹಿಂದು ಜಾಗರಣಾ ವೇದಿಕೆ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರನ್ನು ನೀಡಿದೆ. ಇದೇ ವೇಳೆ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಉದಯನಿಧಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಯ ಮಗ ಮತ್ತು ಸಚಿವನಾದ ಉದಯನಿದಿ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಹಿಂದು ಜಾಗರಣ ವೇದಿಕೆ ದೂರು ನೀಡಿದೆ. ತಾಲೂಕು ಸಂಯೋಜಕರಾದ ಹರೀಶ್ ತಲೆಂಬೀಲ ನೇತೃತ್ವದಲ್ಲಿ ಜಿಲ್ಲಾ ನ್ಯಾಯ ಜಾಗರಣಾ ಪ್ರಮುಖ್ ವಕೀಲರಾದ ರಾಜೇಶ್ ಬೊಳ್ಳುಕಲ್ಲು, ಮಂಗಳೂರು ಮಹಾನಗರ ಮತ್ತು ಗ್ರಾಮಾಂತರ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಕೆಂಪುಗುಡ್ಡೆ, ಬಾಲಕೃಷ್ಣ ಕಲಾಯಿ, ಶರಣ್ ಕಾಮಾಜೆ, ಸಂತೋಷ್ ಜೈನ್, ಬಾಲಕೃಷ್ಣ ಕಾಮಾಜೆ, ಸಂತೋಷ್ ಕಾಮಾಜೆ, ಪವನ್ ನಾವೂರ, ಸುಮಂತ್ ಕಾಮಾಜೆ ಉಪಸ್ಥಿತರಿದ್ದರು,
Be the first to comment on "ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಬಂಟ್ವಾಳದಲ್ಲೂ ಆಕ್ಷೇಪ, ಒಡಿಯೂರು ಶ್ರೀಗಳ ಖಂಡನೆ, ಪೊಲೀಸರಿಗೆ ದೂರು ನೀಡಿದ ಹಿಂಜಾವೇ"