
ಹಿಂದೂ ರುದ್ರ ಭೂಮಿ ನೂತನ ಸಮಿತಿ ಅಸ್ತಿತ್ವಕ್ಕೆ ಸಜಿಪ ಮುನ್ನೂರು ಶಾರದ ನಗರ ಹಿಂದೂ ರುದ್ರ ಭೂಮಿಗೆ 1994ರಲ್ಲಿ ಸರ್ಕಾರ 0.50 ಸೆಂಟ್ಸ್ ಸ್ಥಳ ಮಂಜೂರು ಮಾಡಿದ್ದು ಈತನಕ ಸ್ಮಶಾನ ನಿರ್ಮಾಣ ಆಗದ ಹಿನ್ನೆಲೆಯಲ್ಲಿ ಸಮಾನ ಮನಸ್ಕರು ನೂತನ ಸಮಿತಿ ರಚಿಸಿದ್ದಾರೆ ಗೌರವಾಧ್ಯಕ್ಷರಾಗಿ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅಧ್ಯಕ್ಷರಾಗಿ ಎಂ ಸುಬ್ರಹ್ಮಣ್ಯ ಭಟ್ ಉಪಾಧ್ಯಕ್ಷರಾಗಿ ಸೀತಾರಾಮ ಶೆಟ್ಟಿ ಕಾಂತಾಡಿಗುತ್ತು. ವಿಶ್ವನಾಥ್ ಪೂಜಾರಿ . ಕಾರ್ಯದರ್ಶಿ ಹೇಮಲತಾ, ಜೊತೆ ಕಾರ್ಯದರ್ಶಿ ತಿಮ್ಮಪ್ಪ ಪೂಜಾರಿ , ಖಜಾಂಚಿ ಧನಂಜಯ ಶೆಟ್ಟಿ ಸದಸ್ಯರಾಗಿ ಜಯಂತ ಪೂಜಾರಿ, ಗೋಪಾಲ ಪೂಜಾರಿ ಮಿತ್ತ ಕಟ್ಟ, ಅಶೋಕ ಪೂಜಾರಿ. ಸುಧೀರ್ .ಪುರುಷೋತ್ತಮ ಪೂಜಾರಿ ಮಿತ್ತಕಟ್ಟ . ಎಂ ಪರಮೇಶ್ವರ ಮೂಲ್ಯ. ಜನಾರ್ದನ .ಜಯಂತಿ ಶಾಂತಿನಗರ ಆಯ್ಕೆಯಾಗಿದ್ದಾರೆ ಎಂದು ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ತಿಳಿಸಿದ್ದಾರೆ. —- ಮನವಿ ಸಲ್ಲಿಕೆ ವಿವರಗಳಿಗೆ ಮುಂದೆ ಓದಿರಿ.
ಬಂಟ್ವಾಳ: ಸಜೀಪಮುನ್ನೂರು ಗ್ರಾಮಸ್ಥರ ಬಹುಕಾಲದ ಬೇಡಿಕೆಯಾದ ಸಾರ್ವಜನಿಕ ಹಿಂದೂ ರುದ್ರಭೂಮಿ ನಿರ್ಮಾಣಕ್ಕೆ ಕ್ರಮಕೈಗೊಳ್ಳುವ ಜತೆಗೆ ಹೆಚ್ಚುವರಿ ಜಾಗ ಮಂಜೂರು ಮಾಡುವಂತೆ ಜಿ.ಪಂ.ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ನೇತೃತ್ವದ ನಿಯೋಗ ಮಂಗಳವಾರ ಬಂಟ್ವಾಳ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದೆ. ತಹಶೀಲ್ದಾರ್ ಪರವಾಗಿ ಉಪತಹಸೀಲ್ದಾರ್ ನರೇಂದ್ರನಾಥ ಮಿತ್ತೂರು ಮನವಿ ಸ್ವೀಕರಿಸಿದರು. ಸಜೀಪಮುನ್ನೂರು ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಯೂಸುಫ್ ಕರಂದಾಡಿ, ಎಂ.ಪರಮೇಶ್ವರ, ಸಜೀಪಮೂಡ ಗ್ರಾ.ಪಂ.ಮಾಜಿ ಅಧ್ಯಕ್ಷ ಬಿ.ದೇವಿಪ್ರಸಾದ್ ಪೂಂಜ, ತಾಲೂಕು ರೈತ ಸಂಘದ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್, ಪ್ರಮುಖರಾದ ಸುಧೀರ್ ಕಾನ್ಸಾಲೆ, ಧನಂಜಯ ಶೆಟ್ಟಿ, ಎಂ.ಕೆ.ಉಮರಬ್ಬ, ಜಯಂತಿ ಶಾಂತಿನಗರ, ವಿಶ್ವನಾಥ್ ಮರ್ತಾಜೆ, ಜನಾರ್ದನ ಮೊದಲಾದವರಿದ್ದರು.
Be the first to comment on "ಹಿಂದು ರುದ್ರಭೂಮಿ ನಿರ್ಮಾಣಕ್ಕೆ ಹೆಚ್ಚುವರಿ ಜಾಗ: ತಹಸೀಲ್ದಾರ್ ಗೆ ಮನವಿ ಸಲ್ಲಿಸಿದ ನಿಯೋಗ"