ಕೇರಳ ರಾಜ್ಯದಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಕಂಡುಬಂದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿ ಕೇರಳದಿಂದ ಕರ್ನಾಟಕಕ್ಕೆ ಜಾನುವಾರು ಸಾಗಾಟವನ್ನು ನಿಷೇಧಿಸಲಾಗಿದೆ.
ಸೋಮವಾರ ಈ ಆದೇಶವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಹೊರಡಿಸಿದ್ದಾರೆ. ಕಾಲುಬಾಯಿ ಜ್ವರ ಜಿಲ್ಲೆಗೆ ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಅಗತ್ಯವಿರುವುದರಿಂದ ಕೇರಳದಲ್ಲಿ ರೋಗ ಹತೋಟಿಗೆ ಬರುವವರೆಗೆ ಕೇರಳ ರಾಜ್ಯದಿಂದ ಜಿಲ್ಲೆಗೆ ಬರುವ ಹಾಗೂ ಜಿಲ್ಲೆಯಿಂದ ಕೇರಳ ರಾಜ್ಯಕ್ಕೆ ಜಾನುವಾರುಗಳನ್ನು ಸಾಗಾಣಿಕೆ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಆದೇಶ ಹೊರಡಿಸಿದ್ದಾರೆ.
ಕೇರಳ ರಾಜ್ಯದಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ ರೋಗ ಕಂಡುಬಂದಿದ್ದು ಅದು ವೈರಸ್‍ನಿಂದ ಬಹುಬೇಗ ಆರೋಗ್ಯವಂತ ಜಾನುವಾರುಗಳಿಗೆ ಹರಡುತ್ತದೆ. ಈ ರೋಗ ಜಾನುವಾರುಗಳಿಗೆ ಮರಣಾಂತಿಕವಾಗಿರುವುದರಿಂದ ಕೇರಳ ರಾಜ್ಯಕ್ಕೆ ಜಾನುವಾರು ಸಾಗಾಟ ಮಾಡುವುದನ್ನು ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
https://www.nammoor.com/2023/08/kerala-news.html

Be the first to comment on "ಕಾಲುಬಾಯಿ ಜ್ವರ: ಕಾಸರಗೋಡು – ದಕ್ಷಿಣ ಕನ್ನಡ ಗಡಿಭಾಗದಲ್ಲಿ ಜಾನುವಾರು ಸಾಗಾಟ ನಿಷೇಧ"