ಬೆಂಗಳೂರಿನಲ್ಲಿ ಕರಾವಳಿ ಸಿರಿ ಕ್ಲಬ್ ಆರಂಭಗೊಳ್ಳಲಿದೆ. ಸಂಘಟನೆ ಮೂಲಕ ಬಲಯುತಾರಾಗಿ ಸಮಾಜದಲ್ಲಿರುವ ದುರ್ಬಲರಿಗೆ ಆರ್ಥಿಕ ಸಹಾಯ, ಸಾಮಾಜಿಕ ಪಿಡುಗುಗಳ ವಿರುದ್ಧ ಧ್ವನಿಯಾಗುವುದು, ರಕ್ತದಾನ ಯೋಜನೆ,ಸಮಾಜದಲ್ಲಿ ಆರ್ಥಿಕವಾಗಿ ಕಡುಬಡತನ ಸ್ಥಿತಿಯಲ್ಲಿ ಇರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು, ನಮ್ಮ ನುಡಿ ,ನಮ್ಮ ಸಂಸ್ಕೃತಿ ಬೆಳೆಸುವ ಕಾರ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಯೋಚನೆ, ಕ್ರೀಡೆಗೆ ಪ್ರಾಮುಖ್ಯತೆ ಹಾಗೂ ಪ್ರತಿಭಾವಂತ ಬಡ ಕ್ರೀಡಾಪಟುಗಳಿಗೆ ಆರ್ಥಿಕ ಸಹಾಯ, ಸ್ವಚ್ಛ ಭಾರತದ ಕನಸು, ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಕೈಲಾದ ಸಹಾಯ ಹಾಗೂ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುವುದು ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಕೈಲಾದ ಆರ್ಥಿಕ ಸಹಾಯ, ಆಶ್ರಮಗಳಿಗೆ ಕೈಲಾದ ಆರ್ಥಿಕ ಸಹಾಯ, ಅಳಿವಿನಂಚಿನಲ್ಲಿರುವ ಕನ್ನಡ ಶಾಲೆಗೆ ಹೊಸ ರೂಪ ನೀಡುವುದು,ನಿರುದ್ಯೋಗಿಳಿಗೆ ಉದ್ಯೋಗ ಮಾಹಿತ ನೀಡುವುದು ಹಾಗೂ ಉದ್ಯೋಗ ಮೇಳ ಯೋಜನೆ, ಭಾರತೀಯ ಸೇನೆಗೆ ಸೇರಲು ಬಯಸುವ ಬಡ ಯುವಕ ಯುವತಿಯರಿಗೆ ಆರ್ಥಿಕ ಸಹಾಯ, ಕಾರ್ಮಿಕರ ಹಕ್ಕುಗಳ ಪರವಾಗಿ ಧ್ವನಿಯಾಗಿರುವುದು, ಶೋಷಣೆ ಒಳಗಾದ ವಿದ್ಯಾರ್ಥಿಗಳ ಪರ ನಿಲ್ಲುವುದು , ಪರಿಸರ ಸಂರಕ್ಷಣೆಯ ಅರಿವು ಮೂಡಿಸುವ ಕಾರ್ಯಕ್ರಮ ನಾವು ನಮ್ಮವರು ಎನ್ನುವ ಯೋಚನೆಯೊಂದಿಗೆ ಸಂಘಟನೆ ಮೂಲಕ ಬಲಯುತರಾಗಿ ಸಾಮಾಜಿಕ ಸೇವೆ ಹಾಗೂ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗುವುದು ಯಾವುದೇ ಜಾತಿ ಧರ್ಮ ಬೇಧವಿಲ್ಲದೆ ಸದಾ ಸಾಮಾಜಿಕ ಚಟುವಟಿಕೆಗಳಿಗೂ ಸಿದ್ಧವಾಗುವ ಕನಸಿಕೊಂದಿಗೆ ಕರಾವಳಿ ಸಿರಿ ಕ್ಲಬ್ ಆರಂಭಗೊಳ್ಳಲಿದೆ. ಬೆಂಗಳೂರಿನ ಮಂಗಮ್ಮನಪಾಳ್ಯದ ಮುನಿರೆಡ್ಡಿ ಬಡಾವಣೆಯ 18ನೇ ಕ್ರಾಸ್ ರೋಡ್, ಎನ್.1ಮತ್ತು 2, 5ನೇ ವಾರ್ಡ್ ನಲ್ಲಿ ಚೆಫ್ಟಾಕ್ ಫುಡ್ ಅಂಡ್ ಹಾಸ್ಪಿಟಾಲಿಟಿ ಸರ್ವೀಸಸ್ ಪ್ರೈ ಲಿಮಿಟೆಡ್ ನಾರಾಯಣಗುರು ಸಭಾಭವನದಲ್ಲಿ ಕ್ಲಬ್ ಆಗಸ್ಟ್ 6ರಂದು ಆರಂಭಗೊಳ್ಳಲಿದೆ.
Be the first to comment on "ಬೆಂಗಳೂರಿನಲ್ಲಿ ಕರಾವಳಿ ಸಿರಿ ಕ್ಲಬ್. ಏನಿದರ ವಿಶೇಷ?"