ಮುಸ್ಲಿಂ ಸಮುದಾಯ ಒಕ್ಕೂಟ ವತಿಯಿಂದ ಪಂಚಾಯತ್ ಅಧಿಕಾರಿಗಳ ಸಹಯೋಗದೊಂದಿಗೆ ವಿಟ್ಲ ಸಮೀಪ ಜನಪ್ರಿಯ ಸೆಂಟ್ರಲ್ ಸ್ಕೂಲ್ನಲ್ಲಿ ಗ್ಯಾರಂಟಿ ಯೋಜನೆಗಳಾದ ಗೃಹ ಜ್ಯೋತಿ ಹಾಗು ಗೃಹ ಲಕ್ಷ್ಮೀ ಯೋಜನೆಗಳ ಅರ್ಜಿ ಸಲ್ಲಿಸುವಿಕೆ ಶಿಬಿರ ನಡೆಯಿತು.
ಸುಮಾರು 150 ಫಲಾನುಭವಿಗಳು ಇದರ ಪ್ರಯೋಜನ ಪಡೆದರು ಈ ಶಿಬಿರ ಕಾರ್ಯಕ್ರಮಕ್ಕೆ ಶಾಸಕ ಅಶೋಕ್ ಕುಮಾರ್ ರೈ ಕೊಡಿಂಬಾಡಿ ಭೇಟಿ ನೀಡಿ, ಜನಪರ ಕಾರ್ಯಕ್ರಮಗಳ ಶಿಬಿರ ಆಯೋಜಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು. ಹಾಗು ಸಹಕರಿಸಿದ ಪಂಚಾಯತ್ ಸಿಬ್ಬಂದಿ ವರ್ಗದ ಉತ್ತಮ ನಡೆಯನ್ನು ಶ್ಲಾಘಿಸಿ ಸರಕಾರದ ಜನಪರ ಕಾರ್ಯಗಳು ಮನೆ ಮನೆ ತಲುಪಬೇಕೆಂದು ತಿಳಿಸಿ ಅಧಿಕಾರಿಗಳ ಉತ್ತಮ ನಡೆಗೆ ಅಭಿನಂದಿಸಿದರು.
ಶಾಲಾ ಮುಖ್ಯಸ್ಥರಾದ ಡಾ.ಅಬ್ದುಲ್ ಬಶೀರ್ ಅವರೊಂದಿಗೆ ಮಾತುಕತೆ ನಡೆಸಿದ ಅವರು, ಜನಪರ ಕಾರ್ಯಗಳಿಗೆ ವೇದಿಕೆ ಒದಗಿಸಿಕೊಟ್ಟದಕ್ಕೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ವಿ.ಕೆ ಅಬ್ದುಲ್ ಖಾದರ್ ಹಾಜಿ, ಎಂ ಎಸ್ ಮಹಮ್ಮದ್, ಬದ್ರಿಯಾ ವಿ.ಕೆ.ಅಬ್ದುಲ್ ಖಾದರ್ ಹಾಜಿ ಸುನ್ನಿ ಹಾಗು ಮುಸ್ಲಿಂ ಸಮುದಾಯ ಒಕ್ಕೂಟದ ಪದಾಧಿಕಾರಿಗಳಾದ ರಿಯಾಝ್ ಪರ್ಲಡ್ಕ ನಗರಸಭಾ ಸದಸ್ಯರು ಪುತ್ತೂರು ಹಾಗು ಶಾಹುಲ್ ಹಮೀದ್ (ಅಮ್ಮಿ)ಕಂಬಳಬೆಟ್ಟು, ಝುಬೈರ್ ಪಿ.ಕೆ.ಸಿನಾನ್ ಪರ್ಲಡ್ಕ, ರಶೀದ್ ಮುರ, ಖಾದರ್ ಕಂಬಳಬೆಟ್ಟು, ಹಾಗು ವಿಟ್ಲ ಮುಡ್ನೂರು ವಲಯ ಕಾಂಗ್ರೆಸ್ ನ ಸುಶಾಂತ್ ಶೆಟ್ಟಿ, ರಾಮಣ್ಣ ಪಿಲಿಂಜ, ಸುಮಿತ್ ಶೆಟ್ಟಿ. ಪಂಚಾಯತ್ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.
Be the first to comment on "ಗೃಹಲಕ್ಷ್ಮೀ, ಗೃಹಜ್ಯೋತಿ ಅರ್ಜಿ ಸಲ್ಲಿಸುವ ಶಿಬಿರ: ಶಾಸಕ ಅಶೋಕ್ ಕುಮಾರ್ ರೈ ಭೇಟಿ"