ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ವತಿಯಿಂದ ಜುಲೈ 22ರಂದು ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಕನ್ನಡ ಭವನದಲ್ಲಿ ತಾಳಮದ್ದಳೆ, ದತ್ತಿ ಉಪನ್ಯಾಸ ಮತ್ತು ಕೃತಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ 2 ಗಂಟೆಯಿಂದ ಉಲೂಪಿ ವಿವಾಹ ತಾಳಮದ್ದಳೆ ನಡೆಯಲಿದ್ದು, ಹಿಮ್ಮೇಳದಲ್ಲಿ ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಟಿ.ಡಿ. ಗೋಪಾಲಕೃಷ್ಣ ಭಟ್, ಮಾ.ಅದ್ವೈತ್ ಕನ್ಯಾನ, ಅರ್ಥಧಾರಿಗಳಾಗಿ ಶಂಭು ಶರ್ಮಾ ವಿಟ್ಲ, ಜಯರಾಮ ಭಟ್ ದೇವಸ್ಯ ಮತ್ತು ರಾಜಗೋಪಾಲ ಕನ್ಯಾನ ಭಾಗವಹಿಸುವರು. ಬಳಿಕ ದತ್ತಿ ಉಪನ್ಯಾಸ ಕಸಾಪ ಗೌ. ಪ್ರ.ಕಾರ್ಯದರ್ಶಿ ಮತ್ತು ಲಯನ್ಸ್ ಪ್ರಾಂತೀಯ ಅಧ್ಯಕ್ಷ ರಮಾನಂದ ನೂಜಿಪ್ಪಾಡಿ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಕಳಸ ಪುಟ್ಟದೇವರಯ್ಯ ನಾಗಮ್ಮ ದತ್ತಿ ಉಪನ್ಯಾಸವಾದ ಗಂಗಾ ಪಾದೇಕಲ್ ಅವರ ಮೌನರಾಗಗಳು ಕಾದಂಬರಿ ಅವಲೋಕನವನ್ನು ಉಪನ್ಯಾಸಕಿ, ಕವಯತ್ರಿ ಗೀತಾ ಕೋಂಕೋಡಿ ಮಾಡಲಿದ್ದಾರೆ. ಪ್ರೊ.ಎಂ.ರಾಮಕೃಷ್ಣ ಭಟ್ ದತ್ತಿ ಉಪನ್ಯಾಸವನ್ನು ಅಧ್ಯಾಪಕ ರಮೇಶ್ ಮೆಲ್ಕಾರ್ ಅವರು ಸಂಸ್ಕೃತ ಕನ್ನಡಗಳ ಬಾಂಧವ್ಯ ವಿಚಾರದಲ್ಲಿ ಮಾಡುವರು. ಬಳಿಕ ಸಂಜೆ 5 ಗಂಟೆಗೆ ಕೃತಿಗಳ ಲೋಕಾರ್ಪಣೆ ನಡೆಯುವುದು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಅವರು ಕೃತಿ ಲೋಕಾರ್ಪನೆ ಮಾಡಲಿದ್ದು, ಕೆ.ಪಿ.ರಾಜಗೋಪಾಲ ಕನ್ಯಾನ ಸಂಪಾದಿತ ಕನ್ನಡಾನುವಾದ ಮಲಯಾಳಿ ವಿಷವೈದ್ಯ ಮತ್ತು ರಾಜಗೋಪಾಲ ಕನ್ಯಾನ ಮತ್ತು ಕೆ.ಟಿ.ರೈ ವಿಟ್ಲ ಸಂಪಾದಿತ ಕೆದಂಪಾಡಿ ಜತ್ತಪ್ಪ ರೈ ಅವರ ತುಳು ಗೀತಾಂಜಲಿ ಕೃತಿಯನ್ನು ಬಿಡುಗಡೆ ಮಾಡಲಾಗುವುದು. ಕಸಾಪ ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ ದೀಪ ಪ್ರಜ್ವಲನ ಮಾಡುವರು. ಮುಖ್ಯ ಅತಿಥಿಗಳಾಗಿ ಡಾ. ಕೆದಂಬಾಡಿ ತಿಮ್ಮಪ್ಪ ರೈ ವಿಟ್ಲ, ಡಾ. ಅಜಕ್ಕಲ ಗಿರೀಶ ಭಟ್, ಡಾ. ಜೆಡ್ಡು ಗಣಪತಿ ಭಟ್ ಭಾಗವಹಿಸುವರು ಎಂದು ಕಸಾಪ ಪ್ರಕಟಣೆ ತಿಳಿಸಿದೆ.
Be the first to comment on "ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ತಾಳಮದ್ದಳೆ, ದತ್ತಿ ಉಪನ್ಯಾಸ, ಕೃತಿ ಲೋಕಾರ್ಪಣೆ – ವಿವರಗಳಿಗೆ ಕ್ಲಿಕ್ ಮಾಡಿರಿ"