ಮಂಗಳೂರು ಹೊರವಲಯದ ಕಾವೂರು ಎಂಬಲ್ಲಿ ನಡೆದ ದಾರುಣ ಘಟನೆಯಲ್ಲಿ ನೀರು ತುಂಬಿದ್ದ ಬಕೆಟ್ ಗೆ ಬಿದ್ದು 20 ತಿಂಗಳ ಮಗುವೊಂದು ಮೃತಪಟ್ಟಿದೆ. ಮೂಲತಃ ಜಾರ್ಖಂಡ್ ನಿವಾಸಿ ಸದ್ಯ ಕಾವೂರು ಮಸೀದಿ ಬಳಿ ವಾಸವಿರುವ ಫಿರೋಝ್ ಅನ್ಸಾರಿ ಮತ್ತು ಕಿತಾಬುನ್ ದಂಪತಿಯ ಪುತ್ರಿ ಆಯಿಶಾ ಮೃತಪಟ್ಟಿದೆ. ಬುಧವಾರ ಸಂಜೆ ಮನೆಯಲ್ಲಿ ಅರ್ಧ ನೀರು ತುಂಬಿಸಿಟ್ಟಿದ್ದ ಬಕೆಟ್ ಬಳಿ ಮಗು ಆಟವಾಡುತ್ತಿತ್ತು. ಈ ವೇಳೆ ಮಗು ಬಕೆಟ್ ಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಮಂಗಳೂರಿನಲ್ಲಿ ನೀರು ತುಂಬಿದ್ದ ಬಕೆಟ್ ಗೆ ಬಿದ್ದು 20 ತಿಂಗಳ ಮಗು ಮೃತ್ಯು"