ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ `ರೂವಾರಿ ನಿತ್ಯಾನಂದ ರಮ್ಯಾ ಶೆಟ್ಟಿ ದಂಪತಿಗಳು ತಮ್ಮಮಗಳ ನಾಮಕರಣ ಕಾರ್ಯಕ್ರಮದ ನಿಮಿತ್ತ ಮನೆ ಮನೆಗೆ ತೆರಳಿ ಗಿಡವನ್ನು ನೀಡಿ ನಾಮಕರಣ ಕಾರ್ಯಕ್ರಮಕ್ಕೆ ಆಹ್ವಾನಿಸುವ ಮೂಲಕ “ಗುಬ್ಬಚ್ಚಿಗೂಡು ನಿತ್ಯ ರಮ್ಯ ಪರಿಸರೋತ್ಸವ” ಕಾರ್ಯಕ್ರಮ ಮೆರಗುತಂದರು.
ನಾಮಕರಣ ಕಾರ್ಯಕ್ರಮದಲ್ಲಿ ಸಂಸಾರ ಜೋಡುಮಾರ್ಗ ಸದಸ್ಯರಾದ ರಾಕೇಶ್ ಆಚಾರ್ಯ ಬನಾರಿಯವರು ಪರಿಸರ ಗೀತೆಗಳನ್ನು ಹಾಡಿ ಗಮನ ಸಳೆದರು. ಕುತ್ತುಲೋಡಿ ಭವಾನಿ ಶೆಟ್ಟಿ, ಬೇಬಿಶೆಟ್ಟಿ ಮಿಜಾರ್ ಸಾಂಪ್ರದಾಯಿಕ ಹಾಡನ್ನು ಹಾಡಿದರು.
ಇದೇ ಸಂದರ್ಭ ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ಸಂಚಾಲಕಿ ರಮ್ಯ ನಿತ್ಯಾನಂದ ಶೆಟ್ಟಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿ ಗುರುತಿಸಿದ ಪರಿಸರ ಸಂರಕ್ಷಣೆ ವಿಭಾಗದಲ್ಲಿ ಪ್ರೊ.ರಾಜಮಣಿ ರಾಮಕುಂಜ, ವೈದ್ಯಕೀಯ ಸೇವೆಯಲ್ಲಿ ಡಾ.ದುರ್ಗಾಪ್ರಸಾದ್ ಎಂ.ಆರ್, ಹಾಗೂ ಸ್ವಚ್ಛ ಪರಿಸರ ಸ್ನೇಹಿ ವಿಭಾಗದಲ್ಲಿ ಬಂಟ್ವಾಳ ತಾಲೂಕಿನ ದ.ಕ.ಜಿ.ಪಂ.ಹಿ.ಪ್ರಾ ಮಜಿ ವೀರಕಂಭ ಶಾಲೆಯನ್ನು ‘”ಪ್ರಕೃತಿ ಸ್ನೇಹಿ” ಶಾಲೆಯಾಗಿ ಗುರುತಿಸಿ, ಶಾಲೆಯ ಪ್ರತಿನಿಧಿಯಾಗಿ ಆಗಮಿಸಿದ ಸಂಗೀತಾ ಶರ್ಮ ಅವರನ್ನು ಗೌರವಿಸಿದರು.
ಹೀಗೆ ತನ್ನ ಮಗಳ ನಾಮಕರಣ ಕಾರ್ಯಕ್ರಮವನ್ನು ವಿಶೇಷವಾಗಿ ವೈಭವೀಕರಣ ದ ಕಾಯ೯ಕ್ರಮಗಳ ನಡುವೆ ಈ ರೀತಿಯಾಗಿ ಅರ್ಥಪೂರ್ಣವಾಗಿ ನಡೆದ ಪರಿಸರ ಸ್ನೇಹಿ ಆಚರಣೆಯು ಜನರ ಮನಸ್ಸಿನಲ್ಲಿ ಪರಿಸರದ ಕಾಳಜಿ ಉಂಟುಮಾಡುವಲ್ಲಿ ಉತ್ತಮ ಪ್ರಯತ್ನ ಎಂದರೆ ತಪ್ಪಾಗಲಾರದು. ಇವರ ಈ ಕಾಳಜಿ ಇನ್ನಷ್ಟು ಜನರಲ್ಲಿ ಪರಿಸರದ ಕುರಿತು ಕಾಳಜಿ ಮೂಡುವಂತಾಗಿದೆ. ಗುಬ್ಬಚ್ಚಿಗೂಡು, ಜಾಗೃತಿ ಅಭಿಯಾನದ ರೂವಾರಿ ನಿತ್ಯಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Be the first to comment on "‘ಗುಬ್ಬಚ್ಚಿಗೂಡು’ ನಿತ್ಯ ರಮ್ಯ ಪರಿಸರೋತ್ಸವದಲ್ಲಿ ಸಾಧಕರಿಗೆ ಸನ್ಮಾನ"