ಬಂಟ್ವಾಳ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದ್ದು, ಶಾಲೆಯೊಂದು ಅಪಾಯದ ಸ್ಥಿತಿಯಲ್ಲಿದೆ. ಅದೇ ರೀತಿ ಹಲವು ಮನೆಗಳಿಗೂ ಹಾನಿಗಳು ಸಂಭವಿಸಿವೆ. ಗಡಿಯಾರ ಎಂಬಲ್ಲಿ ಶಾಲೆ ಅಪಾಯದ ಸ್ಥಿತಿಯಲ್ಲಿರುವ ಕಾರಣ, ಮಕ್ಕಳನ್ನು ಮನೆಗೆ ಕಳುಹಿಸಲಾಯಿತು. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆಯನ್ನೂ ನಡೆಸಿದರು.
ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮದ್ಯೆ ಬರುವ ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಗಡಿಯಾರ ಎಂಬಲ್ಲಿರುವ ಸರಕಾರಿ ಶಾಲೆ ಮತ್ತು ವಿದ್ಯುತ್ ಟವರ್ ಕೆಲ ದಿನಗಳಿಂದ ಸುರಿಯುವ ಮಳೆಗೆ ಗುಡ್ಡ ಜರಿದು ಬೀಳುವ ಹಂತದಲ್ಲಿತ್ತು. ಶಾಲೆಯ ಕಟ್ಟಡ ಅಪಾಯದಲ್ಲಿದ್ದ ಕಾರಣ ಕೂಡಲೇ ಶಾಲೆಗೆ ರಜೆ ನೀಡಲಾಗಿತ್ತು.
ಪೆರಾಜೆ ಗ್ರಾಮದ ಮಂಜೊಟ್ಟಿ ಎಂಬಲ್ಲಿ ಶರತ್ ಅವರ ವಾಸ್ತವ್ಯದ ಮನೆಯ ತಡೆಗೋಡೆ ಕುಸಿದುಬಿದ್ದಿದೆ . ವಾಹನ ನಿಲ್ಲಿಸಲು ಮಾಡಿದ ಶೀಟಿನ ಶೆಡ್ ಬಿದ್ದಿರುತ್ತವೆ. ಮಾಣಿ ಗ್ರಾಮದ ಮಾಣಿ ಕೋಡಿ ಎಂಬಲ್ಲಿ ಎಂ. ಜಿ.ಬಾಬು ನಲ್ಕೆ ಅವರ ವಾಸ್ತವ್ಯದ ಹಳೆಯ ಮನೆಗೆ ತೀವ್ರ ಹಾನಿಯಾಗಿದೆ. ಕನ್ಯಾನ ಗ್ರಾಮದ ಪಂಜಾಜೆ ಎಂಬಲ್ಲಿ ಗಂಗಾಧರ ಎಂಬುವವರ ಮನೆಯಿಂದ ಪ್ರತ್ಯೇಕ ಇರುವ ಕೊಟ್ಟಿಗೆಗೆ ನಿನ್ನೆ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಹಾನಿಯಾಗಿರುತ್ತದೆ.
Be the first to comment on "ಬಂಟ್ವಾಳ ತಾಲೂಕಿನಲ್ಲಿ ಭಾರೀ ಮಳೆ: ಅಪಾಯದಲ್ಲಿ ಶಾಲೆ, ಹಲವು ಮನೆಗಳಿಗೆ ಹಾನಿ"