ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಸೋಮವಾರ ಸಂಜೆ ಕೇಂದ್ರ ಮಾಜಿ ಸಚಿವ, ಬಿ.ಜನಾರ್ದನ ಪೂಜಾರಿ ಅವರನ್ನು ಬಂಟ್ವಾಳದ ನಿವಾಸದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದರು.
ಸ್ಪೀಕರ್ ಸ್ಥಾನ ಅತ್ಯಂತ ಗೌರವಯುತ ಹುದ್ದೆಯಾಗಿದ್ದು, ಈ ಮೂಲಕ ಖಾದರ್ ಅವರ ಘನತೆಯೂ ಹೆಚ್ಚಿದೆ ಎಂದು ಪೂಜಾರಿ ಶುಭ ಹಾರೈಸಿದರು. ಬಳಿಕ ಪತ್ರಕರ್ತರ ಜತೆ ಮಾತನಾಡಿದ ಯು.ಟಿ.ಖಾದರ್ ಸಭಾಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ರಾಜಕೀಯವಾಗಿ ಬೆಳೆಸಿದ ಗೌರವಾನ್ವಿತ ಜನಾರ್ದನ ಪೂಜಾರಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೇನೆ. ಎಲ್ಲರ ಆಶೀರ್ವಾದ, ಮಾರ್ಗದರ್ಶನ ಪಡೆದು ಸಂವಿಧಾನಿಕ ಹುದ್ದೆಯನ್ನು ಗೌರವವನ್ನು ಹೆಚ್ಚಿಸುವ ಕಾರ್ಯ ಮಾಡಲಿದ್ದೇನೆ. ಹಿರಿಯರಾದ ವೈಕುಂಠ ಬಾಳಿಗ, ಕೆ.ಎಸ್.ಹೆಗ್ಡೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದು, ಅದಕ್ಕೆ ಅನುಗುಣವಾಗಿ ನಡೆದುಕೊಂಡು ಕ್ಷೇತ್ರದ ಜನತೆಯ ಗೌರವ ಉಳಿಸಲಿದ್ದೇನೆ ಎಂದರು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಮಂಗಳೂರು ತಾ.ಪಂ.ಮಾಜಿ ಅಧ್ಯಕ್ಷ ಮಹಮ್ಮದ್ ಮೋನು, ಪ್ರಮುಖರಾದ ಈಶ್ವರ ಉಳ್ಳಾಲ್, ದೀಪಕ್ ಪಿಲಾರ್, ಪುರುಷೋತ್ತಮ ಶೆಟ್ಟಿ ಪಿಲಾರ್, ಹಾಶೀರ್ ಪೇರಿಮಾರು, ದಿನೇಶ್ ಪೂಜಾರಿ ಮೊದಲಾದವರಿದ್ದರು.
Be the first to comment on "ರಾಜಕೀಯ ಗುರು, ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಆಶೀರ್ವಾದ ಪಡೆದ ಸ್ಪೀಕರ್ ಖಾದರ್"