ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ಬಂಟ್ವಾಳದ ಕೆಳಗಿನಮಂಡಾಡಿ ಎಂಬಲ್ಲಿ ಶನಿವಾರ ತಡರಾತ್ರಿ ನಡೆದಿದ್ದು, ಈ ಸಂದರ್ಭ, ತಲವಾರು ಏಟಿಗೆ ಕೈ ತುಂಡಾಗಿ ನೆಲಕ್ಕೆ ಬಿದ್ದಿದೆ.
ವೈಯಕ್ತಿಕ ದ್ವೇಷದಿಂದ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಆರೋಪಿ ಎನ್ನಲಾದ ಸಂತೋಷ್ ಗಾಗಿ ಬಂಟ್ವಾಳ ನಗರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಗಾಯಾಳು ಶಿವರಾಜ್ ಕುಲಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೈ ಕಳೆದುಕೊಂಡಿದ್ದಾರೆ. ಆರೋಪಿ ನಿನ್ನೆ ಮಧ್ಯರಾತ್ರಿ ಶಿವರಾಜ್ ಅವರಿಗೆ ಕರೆ ಮಾಡಿ ಅರ್ಬಿಗುಡ್ಡೆಯ ಅಂಗಡಿಯೊಂದರ ಸಮೀಪ ಬರಹೇಳಿದ್ದು, ಬಳಿಕ ಹಳೆ ವಿಚಾರವನ್ನು ಕೆದಕಿ ಮಾತಿನ ಚಕಮಕಿ ನಡೆಸಿದ್ದಾನೆ. ಈ ಸಂದರ್ಭ ಸಣ್ಣ ತಲವಾರಿನಿಂದ ಕೊಲೆಯತ್ನ ನಡೆಸಿದ ಸಂದರ್ಭ ಕೈ ಅಡ್ಡ ಹಿಡಿದ ಪರಿಣಾಮ, ಶಿವರಾಜ್ ಅವರ ಕೈ ತುಂಡಾಗಿ ನೆಲಕ್ಕೆ ಬಿದ್ದಿದೆ. ಕೂಡಲೇ ಬೆದರಿದ ಆರೋಪಿ ಪರಾರಿಯಾಗಿದ್ದು, ಶಿವರಾಜ್ ಬಳಿಕ ಸ್ನೇಹಿತರಿಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Be the first to comment on "ವೈಯಕ್ತಿಕ ದ್ವೇಷಕ್ಕೆ ಪರಿಚಿತನಿಂದಲೇ ಕೃತ್ಯ: ತಲವಾರು ಬೀಸಿದಾಗ ಕಡಿದು ನೆಲಕ್ಕೆ ಬಿದ್ದ ಕೈ"