ಪಕ್ಷೇತರ ಅಭ್ಯರ್ಥಿಯಾಗಿ ಪುತ್ತೂರು ಕ್ಷೇತ್ರದಿಂದ ಕಣಕ್ಕಿಳಿದಿರುವ ಅರುಣ್ ಕುಮಾರ್ ಪುತ್ತಿಲ ಪರ ಗುರುವಾರ ಸಂಜೆ ವಿಟ್ಲ ಪೇಟೆಯಲ್ಲಿ ಬೃಹತ್ ರೋಡ್ ಶೋ ಮತ್ತು ಬಹಿರಂಗ ಸಭೆ ನಡೆಯಿತು.
ಸೀಗೆಬಲ್ಲೆ ಸ್ವಾಮಿ ಕೊರಗಜ್ಜ ಸನ್ನಿಧಿ ಹಾಗೂ ವಿಟ್ಲ ಚಂದ್ರನಾಥ ಬಸದಿಯಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿದ ಬಳಿಕ ಬಸದಿ ಬಳಿಯಿಂದ ಮಹಾ ಸಂಗಮ ಬೃಹತ್ ರೋಡ್ ಶೋ ವಿಟ್ಲದ ರಾಜಬೀದಿಗಳಲ್ಲಿ ಸಂಚರಿಸಿತು. ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದ ಸಮೀಪಕ್ಕೆ ಸಾಗಿದ ಬಳಿಕ ವಿಟ್ಲ ಮಹಿಮೆಯ ಗದ್ದೆಯಲ್ಲಿ ಸುಮಾರು 3ಸಾವಿರಕ್ಕೂ ಅಧಿಕ ಮಂದಿ ಉಪಸ್ಥಿತಿಯಲ್ಲಿ ಸಭೆ ನಡೆಯಿತು.
ಈ ಸಂದರ್ಭ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ, ಕಾರ್ಯಕರ್ತರ ಭಾವನೆಗಳಿಗೆ ಆಗಿರುವ ನೋವಿನ ಧ್ವನಿಯಾಗಿ ನಿಲ್ಲುವ ಅನಿವಾರ್ಯತೆ ಎದುರಾಗಿದೆ ಎಂದರು.ಮುಖಂಡ ಶ್ರೀಕೃಷ್ಣ ಉಪಾಧ್ಯಾಯ ಮಾತನಾಡಿದರು. ಮುಖಂಡರಾದ ಡಾ. ಸುರೇಶ್ ಪುತ್ತೂರಾಯ, ಡಾ. ಗಣೇಶ್ ಮುದ್ರಾಜೆ, ಉದ್ಯಮಿ ರಾಜಶೇಖರ ಬನ್ನೂರು, ವಿಟ್ಲ ಗ್ರಾಮ ಪಂಚಾಯಿತಿ ಸದಸ್ಯ ರಘುರಾಮ ವಿಟ್ಲ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಸಂದ್ಯಾಮೋಹನ್ ಉಪಸ್ಥಿತರಿದ್ದರು. ಸುಕನ್ಯಾ ಸೇರಾಜೆ ಪ್ರಾರ್ಥಿಸಿದರು. ಶ್ರೀಕೃಷ್ಣ ವಿಟ್ಲ ಸ್ವಾಗತಿಸಿದರು. ಸದಾಶಿವ ಅಳಿಕೆ ಕಾರ್ಯಕ್ರಮ ನಿರೂಪಿಸಿದರು.
Be the first to comment on "ವಿಟ್ಲದಲ್ಲಿ ಅರುಣ್ ಪುತ್ತಿಲ ಪರ ಮಹಾಸಂಗಮ, ಶಕ್ತಿಪ್ರದರ್ಶನ"