ಬಂಟ್ವಾಳ: ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ. ರಮಾನಾಥ ರೈ ಅವರ ಚುನಾವಣಾ ಪ್ರಚಾರ ಕಚೇರಿಗೆ ಕೇರಳ ವಿಧಾನಸಭಾ ವಿಪಕ್ಷ ನಾಯಕ ರಮೇಶ್ ಚೆನ್ನಿತಲ ಭೇಟಿ ನೀಡಿದರು. ಕಾಸರಗೋಡು ಸಂಸದ ರಾಜ್ ಮೋಹನ್ ಉನ್ನಿತಾನ್, ಕಾಸರಗೋಡು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹರ್ಷದ್ ವರ್ಕಾಡಿ ಅವರ ಜೊತೆಗಿದ್ದರು.
ರಮಾನಾಥ ರೈ ಅವರು ಚುನಾವಣೆಯಲ್ಲಿ ಭಾರೀ ಬಹುಮತದಿಂದ ಗೆದ್ದು ಬರಲಿ. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಲು ಜಾತ್ಯತೀತ ಶಕ್ತಿಗಳು ಎಲ್ಲಾ ರಾಜ್ಯಗಳಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಈ ವೇಳೆ ರಮೇಶ್ ಚೆನ್ನಿತಲ ಹೇಳಿದರು.
ಮೋಹನ್ ಉನ್ನಿತಾನ್ ಹಾಗೂ ಹರ್ಷದ್ ವರ್ಕಾಡಿ ಅವರು ರಮಾನಾಥ ರೈ ಅವರಿಗೆ ಶುಭ ಹಾರೈಸಿದರು. ರೈಯವರ ಚುನಾವಣಾ ಪ್ರಚಾರದ ಕಾರ್ಯವೈಖರಿಯ ಬಗ್ಗೆ ಸಂಕ್ಷಿಪ್ತವಾಗಿ ಮಾತುಕತೆ ನಡೆಸಿದರು. ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪಿಯೂಸ್ ಎಲ್. ರೊಡ್ರಿಗಸ್, ಬ್ಲಾಕ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರುಗಳಾದ ಜಯಂತಿ ಪೂಜಾರಿ, ನಾರಾಯಣ ನಾಯ್ಕ್, ಶಬೀರ್ ಸಿದ್ದಕಟ್ಟೆ, ಅಬ್ಬಾಸ್ ಅಲಿ, ಪ್ರವೀಣ್ ಬಂಟ್ವಾಳ್ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ರಮಾನಾಥ ರೈ ಚುನಾವಣಾ ಕಚೇರಿಗೆ ರಮೇಶ್ ಚೆನ್ನಿತಲ ಭೇಟಿ"