ಬಂಟ್ವಾಳ: ಬಂಟ್ವಾಳ ಬಿಜೆಪಿ ಕಚೇರಿಗೆ ಆಗಮಿಸಿದ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಶನಿವಾರ ಆಗಮಿಸಿದರು. ಪುತ್ತೂರಿಗೆ ತೆರಳುವ ಮಾರ್ಗದಲ್ಲಿ ಆಗಮಿಸಿದ ಅಣ್ಣಾಮಲೈ, ಬಿಜೆಪಿಯ ಅಭ್ಯರ್ಥಿ ರಾಜೇಶ್ ನಾಯ್ಕ್ ಜೊತೆ ಕೆಲಕಾಲ ಮಾತುಕತೆ ನಡೆಸಿದರು. ಬಳಿಕ ಕಾರ್ಯಕರ್ತರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರಿಗೆ ರಿವರ್ಸ್ ಗೇರ್ ಹಾಕುವ ಬಯಕೆ. ಅವರು ಬಂಟ್ವಾಳವನ್ನು 2017ರ ಅಂಚಿಗೆ ಕೊಂಡೊಯ್ಯಲು ಹೊರಟರೆ, ಬಂಟ್ವಾಳ 2.0ರ ಕಡೆಗೆ ರಾಜೇಶ್ ನಾಯ್ಕ್ ಮುನ್ನಡೆಸುತ್ತಿದ್ದಾರೆ. ಕ್ಷೇತ್ರದಾದ್ಯಂತ ಬಿಜೆಪಿ ಪರ ಅಲೆ ಇದೆ. ಬಂಟ್ವಾಳದಲ್ಲಿ ಪ್ರಗತಿಯ ನೋಟವಿದೆ. ಹೀಗಿರುವ ಸಂದರ್ಭ ಬಿಜೆಪಿ ಗೆದ್ದರಷ್ಟೇ ಮೂಲಭೂತವಾದಿ ಕೃತ್ಯಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ಕಾರ್ಯಕರ್ತರಿಗೆ ಅಣ್ಣಾಮಲೈ ಶಕ್ತಿ ತುಂಬಿದ್ದು, ಬಿಜೆಪಿ ಗೆದ್ದೇ ಗೆಲ್ಲುತ್ತದೆ. ವಿಜಯೋತ್ಸವದ ಸಂದರ್ಭ ಅಣ್ಣಾಮಲೈ ಮತ್ತೆ ಭಾಗವಹಿಸಲಿದ್ದಾರೆ ಎಂದರು.ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಮುಖಂಡರಾದ ದೇವಪ್ಪ ಪೂಜಾರಿ, ಆರ್.ಸಿ.ನಾರಾಯಣ, ಸುಲೋಚನಾ ಜಿ.ಕೆ.ಭಟ್, ಹರಿಕೃಷ್ಣ ಬಂಟ್ವಾಳ, ದೇವದಾಸ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ADVERTISMENT
Be the first to comment on "ಬಂಟ್ವಾಳ ಬಿಜೆಪಿ ಕಚೇರಿಗೆ ಅಣ್ಣಾಮಲೈ ಭೇಟಿ, ಬಂಟ್ವಾಳ ಅಭಿವೃದ್ಧಿ 2.0ಗೆ ಕೊಂಡೊಯ್ಯಲು ರಾಜೇಶ್ ನಾಯ್ಕ್ ಗೆಲುವು ಅವಶ್ಯವೆಂದ ತಮಿಳುನಾಡು ರಾಜ್ಯಾಧ್ಯಕ್ಷ"