ಬಂಟ್ವಾಳ: ನಾಮಪತ್ರ ಹಿಂತೆಗೆದುಕೊಳ್ಳುವ ಕೊನೆಯ ದಿನವಾದ ಸೋಮವಾರ ಬಂಟ್ವಾಳದಲ್ಲಿ ನಾಮಪತ್ರ ಸಲ್ಲಿಸಿದವರ ಪೈಕಿ ಎಸ್.ಡಿ.ಪಿ.ಐ.ನ ಬದಲಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮಜೀದ್ ನಾಮಪತ್ರ ಹಿಂತೆಗೆದುಕೊಂಡಿದ್ದು, ಇದೀಗ ಕಣದಲ್ಲಿ ಐವರು ಅಭ್ಯರ್ಥಿಗಳಿದ್ದಾರೆ. ಬಿಜೆಪಿಯಿಂದ ಹಾಲಿ ಶಾಸಕ ರಾಜೇಶ್ ನಾಯ್ಕ್, ಕಾಂಗ್ರೆಸ್ ನಿಂದ ಮಾಜಿ ಸಚಿವ ಬಿ.ರಮಾನಾಥ ರೈ, ಎಸ್.ಡಿ.ಪಿ.ಐ.ನಿಂದ ಇಲ್ಯಾಸ್ ಮಹಮ್ಮದ್ ತುಂಬೆ ಮತ್ತು ಜೆಡಿಎಸ್ ನಿಂದ ಪ್ರಕಾಶ್ ಗೋಮ್ಸ್ ಇದ್ದರೆ, ಆಮ್ ಆದ್ಮಿ ಪಾರ್ಟಿಯಿಂದ ಪುರುಷೋತ್ತಮ ಅವರು ಕಣದಲ್ಲಿದ್ದಾರೆ. ಉತ್ತಮ ಪ್ರಜಾಕೀಯತ ಪಕ್ಷದ ಅನೀಶ್ ಶೆಟ್ಟಿ ಮತ್ತು ಪಕ್ಷೇತರ ಅಭ್ಯರ್ಥಿ ಬಿ.ಟಿ.ಕುಮಾರ್ ಅವರ ನಾಮಪತ್ರಗಳು ತಿರಸ್ಕೃತಗೊಂಡಿದ್ದವು.

ADVERTISMENT
Be the first to comment on "ವಿಧಾನಸಭೆ ಚುನಾವಣೆ – ಬಂಟ್ವಾಳ ಕ್ಷೇತ್ರ: ಕಣದಲ್ಲಿ ಐವರು"