ಮೂಡಂಬೈಲು ಸಿ.ಗೋಪಾಲಕೃಷ್ಣ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಡಾ.ಸಿ.ಕೃಷ್ಣಶಾಸ್ತ್ರಿ ಮೂಡಂಬೈಲು ಕಡಬ ಇವರಿಗೆ ಹುಟ್ಟೂರ ಅಭಿನಂದನೆ ಕಾರ್ಯಕ್ರಮ ನಡೆಯಲಿದ್ದು, ಇದೇ ವೇಳೆ ಹನುಮಗಿರಿ ಮೇಳದಿಂದ ಯಕ್ಷಗಾನ ಬಯಲಾಟವೂ ಇರಲಿದೆ. ಏ.15ರಂದು ಸಂಜೆ 6.30ಕ್ಕೆ ಮೂಡಂಬೈಲು ಶ್ರೀ ಮಹಿಷಮರ್ದಿನಿ ಭಜನಾ ಮಂದಿರ ವಠಾರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣವನ್ನು ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ಮುಖ್ಯೋಪಾಧ್ಯಾಯ ಕೆ.ಯಶವಂತ ರೈ ಮಾಡಲಿದ್ದಾರೆ. ಈ ಸಂದರ್ಭ ಹನುಮಗಿರಿ ಮೇಳದ ಮಾನಿಷಾದ ಯಕ್ಷಗಾನ ಪ್ರದರ್ಶನ ಇರಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಜಾಹೀರಾತು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಏಪ್ರಿಲ್ 15ರಂದು ಡಾ. ಸಿ.ಕೃಷ್ಣಶಾಸ್ತ್ರಿ ಮೂಡಂಬೈಲು ಕಡಬ ಅವರಿಗೆ ಹುಟ್ಟೂರ ಅಭಿನಂದನೆ, ಯಕ್ಷಗಾನ ಬಯಲಾಟ"