ಬಿ.ಸಿ.ರೋಡ್ ರೈಲ್ವೆ ಸ್ಟೇಶನ್ ಬಳಿ ಆತಂಕ ಮೂಡಿಸಿದ ಬೆಂಕಿ, ದಟ್ಟ ಹೊಗೆ

ಜಾಹೀರಾತು

ಒಂದೆಡೆ ರೈಲ್ವೆ ನಿಲ್ದಾಣ, ಮತ್ತೊಂದೆಡೆ ಲಯನ್ಸ್ ಸೇವಾ ಮಂದಿರ, ಗುಡ್ಡೆಯಂಥ ಜಾಗದಲ್ಲಿ ಒಣ ಹುಲ್ಲು, ರಸ್ತೆ ಬದಿಯೇ ಮಾಧ್ಯಮಗಳು ನೂರಾರು ಬಾರಿ ಗಮನ ಸೆಳೆಯುತ್ತಿರುವ ಕಸದ ರಾಶಿ… ಗುರುವಾರ ಮಧ್ಯಾಹ್ನ ಇಲ್ಲಿ ಬೆಂಕಿ ಕೊಟ್ಟರೇ, ಬೆಂಕಿ ಸೃಷ್ಟಿಯಾಯಿತೇ ಅಥವಾ ಏನಾಯಿತೋ?…. ದಟ್ಟ ಹೊಗೆಯಂತೂ ಕಾಣಿಸಿಕೊಂಡಿತು.

ಬಿ ಸಿ ರೋಡು ನಾರಾಯಣಗುರು ವೃತ್ತದ ಬಳಿ ಗೂಡಿನಬಳಿ ರಸ್ತೆ ಬದಿ ವಾಹನ ಸವಾರರು ಸಂಚರಿಸಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಯಿತು. ಪರಿಸರವಿಡೀ ಬೆಂಕಿ ಜ್ವಾಲೆ ಹಾಗೂ ಭಾರೀ ಪ್ರಮಾಣದ ಹೊಗೆ ಆವರಿಸಿಕೊಂಡು ರಸ್ತೆಯಲ್ಲಿ ವಾಹನ ಹಾಗೂ ಜನ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ನಡೆಯಿತು.

ಕೂಡಲೇ ಸಾರ್ವಜನಿಕರು ಅಗ್ನಿಶಾಮಕ ದಳ, ಪೊಲೀಸ್ ಇಲಾಖೆಗೆ ಕರೆ ಮಾಡಿದರು.ಮೆಸ್ಕಾಂ ಇಲಾಖೆ ಸಿಬ್ಬಂದಿಯೂ ಆಗಮಿಸಿ ಬೆಂಕಿ ನಂದಿಸಲು ಹಾಗೂ ಹೆಚ್ಚಿನ ಅಪಾಯವಾಗದಂತೆ ಸಹಕರಿಸಿದರು. ಪೊಲೀಸ್ ಎಸ್.ಐ. ರಾಮಕೃಷ್ಣ ಸ್ಥಳೀಯರೊಂದಿಗೆ ಹಾಗೂ ಮೆಸ್ಕಾಂ ಸಿಬ್ಬಂದಿ ಜೊತೆ ಕಾರ್ಯಾಚರಣೆಗಿಳಿದರು.  ಕೆಲಹೊತ್ತಿನ ಬಳಿಕ ಆಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ  ಎರಡು ವಾಹನಗಳಲ್ಲಿ ರ್ಯಾಚರಣೆ ಆರಂಭಿಸಿದರು.

ಅಗ್ನಿ ಅವಘಡ ಸಂಭವಿಸಿದ ಸ್ಥಳದ ಪಕ್ಕದಲ್ಲೇ ರೈಲ್ವೆ ನಿಲ್ದಾಣ ಹಾಗೂ ಲಯನ್ಸ್ ಭವನ ಇದೆ. ಕೆಲ ದೂರದಲ್ಲೇ ಬಿ.ಸಿ.ರೋಡ್ ಪೇಟೆಯೂ ಇದ್ದು, ಕುರುಚಲು ಗಿಡಗಳು ರೈಲ್ವೆ ಟ್ರಾಕ್ ಸಮೀಪವೂ ಇದೆ. ಬಂಟ್ವಾಳ ಪುರಸಭೆಯ ಕುಡಿಯುವ ನೀರಿನ ಪೈಪ್ ಲೈನ್ ಕೂಡಾ ಸಾಗುತ್ತಿದೆ. ಸುಮಾರು 2 ಗಂಟೆ ವೇಳೆಗೆ ದಟ್ಟ ಹೊಗೆ ಈ ಭಾಗದಲ್ಲಿ ಆಗಮಿಸಿದ್ದು, ಆ ಹೊತ್ತಿಗಾಗಲೇ ಸ್ಥಳೀಯರು ಜಮಾಯಿಸಿ, ಅಗ್ನಿ ನಂದಿಸಲು ತೊಡಗಿದರು. ಕೆಲ ಹೊತ್ತು ಬಿ.ಸಿ.ರೋಡ್ ಗೂಡಿನಬಳಿ ರಸ್ತೆಯನ್ನು ಬಂದ್ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ಯೋಜನಾ ನಿರ್ದೇಶಕರೂ ಆಗಿರುವ ಅಬಿದ್ ಗದ್ಯಾಲ್ ಮತ್ತು ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಬಿ.ಸಿ.ರೋಡ್ ರೈಲ್ವೆ ಸ್ಟೇಶನ್ ಬಳಿ ಆತಂಕ ಮೂಡಿಸಿದ ಬೆಂಕಿ, ದಟ್ಟ ಹೊಗೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*