ಬಂಟ್ವಾಳ: ರಾಹುಲ್‌ಗಾಂಧಿ ಅನರ್ಹತೆ ವಿಚಾರ ಸೇರಿದಂತೆ ಕೇಂದ್ರ ಸರ್ಕಾರದ ಎಲ್ಲ ನಡವಳಿಕೆಗಳು ಸಂವಿಧಾನ ವಿರೋಧಿಯಾಗಿದೆ ಎಂದು ಬಂಟ್ವಾಳ ತಾಲೂಕು ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ಆರೋಪಿಸಿದೆ.
ಈ ಕುರಿತು ಬಂಟ್ವಾಳ ತಾಲೂಕು ತಹಸೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿರುವ ಸಮಿತಿ, ಎಲ್ಲಾ ಹಂತದ ಸರ್ಕಾರಗಳು ಜವಾಬ್ದಾರಿಯುತ ನಡೆಯನ್ನು ಅನುಸರಿಸುವಂತೆ ಒತ್ತಾಯಿಸಿತು.
ಸಮಿತಿ ಅಧ್ಯಕ್ಷ ಮೋಹನ್ ಶೆಟ್ಟಿ ಪಂಜಿಕಲ್ಲು, ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್, ಪ್ರಮುಖರಾದ ಅಬ್ಬಾಸ್ ಅಲಿ, ಪ್ರಕಾಶ ಶೆಟ್ಟಿ ಶ್ರೀಶೈಲ, ಪ್ರಭಾಕರ ದೈವಗುಡ್ಡೆ, ಮ್ಯಾಥ್ಯೂ, ಹರೀಶ, ಕೇಶವ ಪೂಜಾರಿ, ಕೇಶವ ಬಿ., ಎಂ.ಹೆಚ್.ಮುಸ್ತಾಫಾ, ಅಬ್ದುಲ್ ಶರೀಫ್ , ಎಂ.ಬಿ.ಭಾಸ್ಕರ್, ರಿಚರ್ಡ್ ಶಂಭೂರು, ಡೊಂಬಯ್ಯ ಕುಲಾಲ, ಬಶೀರ್ ಕಾರಾಜೆ, ಇಬ್ರಾಹಿಂ ಉಳಿ ಮೊದಲಾದವರಿದ್ದರು.
Be the first to comment on "ಕೇಂದ್ರದ ನಡವಳಿಕೆಗಳು ಸಂವಿಧಾನ ವಿರೋಧಿ: ಬಂಟ್ವಾಳದಲ್ಲಿ ಸಮಾನ ಮನಸ್ಕ ಸಮನ್ವಯ ಸಮಿತಿ ಆರೋಪ"