ಬಂಟ್ವಾಳ ಕ್ಷೇತ್ರಕ್ಕೆ ವಿಜಯ ಸಂಕಲ್ಪ ಹೆಸರಿನಲ್ಲಿ ಬಿಜೆಪಿಯ ಯಾತ್ರೆ ಭಾನುವಾರ ಪುಂಜಾಲಕಟ್ಟೆ ಮೂಲಕ ಪ್ರವೇಶಿಸಿ ಹೆದ್ದಾರಿಯಲ್ಲಿ ರೋಡ್ ಶೋ, ಬೈಕ್ ಜಾಥಾ ಬಳಿಕ ಬಂಟ್ವಾಳದಲ್ಲಿ ಸಮಾಪನಗೊಂಡಿತು.
ಈ ಸಂದರ್ಭ ಮಾತನಾಡಿದ ಮಾಜಿ ಸಚಿವ, ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ,ಇಡೀ ಕರ್ನಾಟಕಕ್ಕೆ ರಾಷ್ಟ್ರೀಯತೆ ಜಾಗೃತಿಯನ್ನು ದಕ್ಷಿಣ ಕನ್ನಡ ಜಿಲ್ಲೆ ಮಾಡಿದ್ದು, ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಪೂರ್ಣ ಬಹುಮತದೊಂದಿಗೆ ಬರಲು ನೆರವಾಗಬೇಕು ಎಂದರು. ಕರ್ನಾಟಕದ ಎಲ್ಲ ಇಲಾಖೆಗಳ ಹಣವನ್ನು ನೇರವಾಗಿ ಬಂಟ್ವಾಳಕ್ಕೇ ತಂದವರು ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಎಂದು ಶಾಸಕರನ್ನು ಶ್ಲಾಘಿಸಿದರು. (ವಿಜಯ ಸಂಕಲ್ಪ ಯಾತ್ರೆ ವಿಡಿಯೋಗೆ ಕ್ಲಿಕ್ ಮಾಡಿರಿ) VIDEO
ಬೆಳ್ತಂಗಡಿಯಿಂದ ಬಂದ ರಥವನ್ನು ಶಾಸಕ ರಾಜೇಶ್ ನಾಯ್ಕ್ ಮತ್ತು ಜಿಪಂ ಮಾಜಿ ಸದಸ್ಯ ತುಂಗಪ್ಪ ಬಂಗೇರ ಪುಂಜಾಲಕಟ್ಟೆಯಲ್ಲಿ ಭಾನುವಾರ ಮಧ್ಯಾಹ್ನ ಸ್ವಾಗತಿಸಿದರು. ಬಳಿಕ ಬಂಟ್ವಾಳದ ಬಡ್ಡಕಟ್ಟೆವರೆಗೆ ಬೈಕ್ ಜಾಥಾ ನಡೆಯಿತು. ಈ ಸಂದರ್ಭ ಅಪಾರ ಸಂಖ್ಯೆಯಲ್ಲಿ ಬೈಕ್, ಆಟೊ, ಕಾರು ಮೊದಲಾದ ವಾಹನಗಳು ಸಾಗಿಬಂದವು. ಬಂಟ್ವಾಳ ಬಡ್ಡಕಟ್ಟೆ ಶ್ರೀ ಹನುಮಾನ್ ದೇವಸ್ಥಾನ ಮುಂಭಾಗದಿಂದ ರೋಡ್ ಶೋ ನಗರ ಮಾರ್ಕೆಟ್ ರಸ್ತೆಯಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗ ರಥಬೀದಿಗೆ ಬಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಸಮಾಪನಗೊಂಡಿತು
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ,ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ದತ್ತಾತ್ರೇಯ, ಸುಲೋಚನಾ ಜಿ.ಕೆ. ಭಟ್, ಕೊರಗಪ್ಪ ನಾಯ್ಕ್, ಹರಿಕೃಷ್ಣ ಬಂಟ್ವಾಳ್, ರಾಮದಾಸ ಬಂಟ್ವಾಳ, ಸುಧೀರ್ ಶೆಟ್ಟಿ ಕಣ್ಣೂರು, ಮಾಧವ ಮಾವೆ, ದೇವದಾಸ ಶೆಟ್ಟಿ,ದೇವಪ್ಪ ಪೂಜಾರಿ, ಡೊಂಬಯ ಅರಳ, ರವೀಶ್ ಶೆಟ್ಟಿ ಕರ್ಕಳ, ಸುದರ್ಶನ ಬಜ, ಪ್ರಸಾದ್ ಕುಮಾರ್, ರೋನಾಲ್ಡ್ ಡಿಸೋಜ, ಗಣೇಶ್ ರೈ ಮಾಣಿ, ರಮಾನಾಥ ರಾಯಿ, ಪ್ರಕಾಶ್ ಅಂಚನ್, ಪುರುಷೋತ್ತಮ ಶೆಟ್ಟಿ ವಾಮದಪದವು, ಗೋವಿಂದ ಪ್ರಭು, ಪುಪ್ಪರಾಜ ಶೆಟ್ಟಿ, ಅರುಣ್ ರೋಶನ್ ಡಿಸೋಜ, ಯಶೋಧರ ಕರ್ಬೆಟ್ಟು, ಮೋನಪ್ಪ ದೇವಸ್ಯ, ಪುರುಷೋತ್ತಮ ಸಾಲಿಯಾನ್ ಶಂಭೂರು, ಧನಂಜಯ ಶೆಟ್ಟಿ ಸರಪಾಡಿ, ವಜ್ರನಾಥ ಕಲ್ಲಡ್ಕ, ಮೋನಪ್ಪ ದೇವಸ್ಯ, ಕೃಷ್ಣಪ್ಪ ಪೂಜಾರಿ, ಸುರೇಶ್ ಕೋಟ್ಯಾನ್, ರಶ್ಮಿತ್ ಶೆಟ್ಟಿ ಕೈತ್ರೋಡಿ, ಹರ್ಷಿಣಿ ಪುಷ್ಪಾನಂದ ಪಕ್ಷದ ವಿವಿಧ ಮುಖಂಡರು, ಪದಾಧಿಕಾರಿಗಳು, ಮಹಿಳಾ, ಯುವ ಮೋರ್ಚಾಗಳ ಮುಖಂಡರು, ಕಾರ್ಯಕರ್ತರು, ವಿವಿಧ ಗ್ರಾಪಂ, ಪುರಸಭೆ ಸದಸ್ಯರು ಮೊದಲಾದವರಿದ್ದರು
Be the first to comment on "ಬಂಟ್ವಾಳದಲ್ಲಿ ಅದ್ದೂರಿಯ ವಿಜಯ ಸಂಕಲ್ಪ ಯಾತ್ರೆ: ಬಿಜೆಪಿಗೆ ಪೂರ್ಣ ಬಹುಮತ – ಕೆ.ಎಸ್.ಈಶ್ವರಪ್ಪ"