ನನ್ನ ಅವಧಿಯಲ್ಲಾದ ಅಭಿವೃದ್ಧಿ ಕಾರ್ಯಗಳ ವಿವರಗಳನ್ನು ಯಾರು ಬೇಕಾದರೂ ಅಂತರ್ಜಾಲದಲ್ಲಿ ಗಮನಿಸಬಹುದು. ಅಭಿವೃದ್ಧಿಯ ಕುರಿತು ಸಂದೇಹಗಳಿದ್ದರೆ ಗಮನಿಸಬಹುದು, ಕ್ಷೇತ್ರದಲ್ಲಿ ಶಾಂತಿ, ನೆಮ್ಮದಿಯೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ ತೃಪ್ತಿ ತನಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಶುಕ್ರವಾರ ಪಂಜಿಕಲ್ಲು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ ನೆರವೇರಿಸಿದ ಬಳಿಕ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.
ಈ ಸಂದರ್ಭ ಮಾತನಾಡಿದ ಪಂಜಿಕಲ್ಲು ಗ್ರಾಪಂ ಅಧ್ಯಕ್ಷ ಸಂಜೀವ ಪೂಜಾರಿ, ರಾಜೇಶ್ ನಾಯ್ಕ್ ಶಾಸಕರಾದ ಬಳಿಕ 14 ಕೋಟಿ ರೂಗೂ ಮಿಕ್ಕಿ ಅನುದಾನ ಪಂಜಿಕಲ್ಲಿಗೆ ಬಂದಿದೆ. ಸೇತುವೆ ಸಹಿತ ಕಿಂಡಿ ಅಣೆಕಟ್ಟು, ರಸ್ತೆಗಳು ಇದರಲ್ಲಿ ಸೇರಿವೆ ವಸತಿರಹಿತರ ಸಮಸ್ಯೆಗಳೂ ಈಡೇರಿವೆ ಎಂದರು.
ಬಿಜೆಪಿ ಕ್ಷೇತ್ರ ಕೋಶಾಧಿಕಾರಿ ಪ್ರಕಾಶ್ ಅಂಚನ್ ಮಾತನಾಡಿ, ಪಕ್ಷದ ಗೆಲುವಿಗೆ ಶ್ರಮಿಸಲು ಕರೆ ನೀಡಿದರು. ಗ್ರಾಪಂ ಉಪಾಧ್ಯಕ್ಷೆ ಜಯಶ್ರೀ ಪಟ್ರಾಡಿ, ಸದಸ್ಯರಾದ ಹರೀಶ್ ಪೂಜಾರಿ ತಾಕೋಡೆ, ಬಾಲಕೃಷ್ಣ ಪೂಜಾರಿ, ಮೋಹನ್ ದಾಸ್ , ಪೂವಪ್ಪ ಮೆಂಡನ್, ಚಿತ್ರಾಕ್ಷಿ, ರೂಪ, ನಳಿನಿ, ಚಂದ್ರಾವತಿ ಶೆಟ್ಟಿ, ಶೋಭಾ, ಗೋಪಾಲ ಕುಲಾಲ್ ಮಜಲೊಡಿ, ಚಿದಾನಂದ ಕುಲಾಲ್, ಸುಜಾತ, ಪಂಜಿಕಲ್ಲು ಶಕ್ತಿಕೇಂದ್ರದ ಸಂಚಾಲಕ ಲಕ್ಷೀನಾರಾಯಣ, ಮೂಡನಡುಗೋಡು ಶಕ್ತಿಕೇಂದ್ರದ ಸಂಚಾಲಕ ಹರೀಶ್, ಬುಡೋಳಿ ಶಕ್ತಿ ಕೇಂದ್ರದ ಸಂಚಾಲಕ ಶಿವರಾಮ ಪೂಜಾರಿ, ಪ್ರಮುಖರಾದ ಪುರುಷೋತ್ತಮ ಶೆಟ್ಟಿ ವಾಮದಪದವು, ಯಶೋಧರ ಕರ್ಬೆಟ್ಟು, ರುಕ್ಮಯ ಪೂಜಾರಿ, ಪ್ರವೀಣ್ ಪೂಜಾರಿ, ಶರ್ಮಿತ್ ಜೈನ್ , ಕೆ.ಎನ್.ಶೇಖರ್, ವಿಕೇಶ್ ಬಾಲೇಶ್ವರ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ನನ್ನ ಅವಧಿಯ ಅಭಿವೃದ್ಧಿ ಕಾರ್ಯದ ವಿವರ ಪಾರದರ್ಶಕ: ಪಂಜಿಕಲ್ಲಿನಲ್ಲಿ ಶಾಸಕ ರಾಜೇಶ್ ನಾಯ್ಕ್"