ನೆಟ್ಲಮುಡ್ನೂರು ಗ್ರಾಮ ಪಂಚಾಯಿತಿಗಳಿಗೆ ತೆರವಾದ ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆ ಮತ ಎಣಿಕೆ ಬಂಟ್ವಾಳ ಆಡಳಿತ ಸೌಧದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದ್ದು, ನೆಟ್ಲಮುಡ್ನೂರಿನಲ್ಲಿ ಬಿಜೆಪಿ ಬೆಂಬಲಿತ ಸುಜಾತಾ ಜಗದೀಶ ಪೂಜಾರಿ ಮಿತ್ತಕೋಡಿ ಗೆಲುವು ಸಾಧಿಸಿದ್ದಾರೆ.
ನೆಟ್ಲಮುಡ್ನೂರಿನ ಎರಡನೇ ವಾರ್ಡಿನ ಸದಸ್ಯರು ಅಕಾಲಿಕವಾಗಿ ನಿಧನರಾದ ಹಿನ್ನೆಲೆಯಲ್ಲಿ ಈ ಉಪಚುನಾವಣೆ ನಡೆದಿತ್ತು. ನೆಟ್ಲಮುಡ್ನೂರಿನಲ್ಲಿ ಬಿಜೆಪಿ ಬೆಂಬಲಿತ ಸುಜಾತಾ ಜಗದೀಶ ಪೂಜಾರಿ 353 ಮತ ಪಡೆದರೆ, ಕಾಂಗ್ರೆಸ್ ಬೆಂಬಲಿತ ಹರಿಣಾಕ್ಷಿ 239 ಮತ ಗಳಿಸಿದರು. ಬಿಜೆಪಿ ಈ ಬಾರಿಯೂ ಸ್ಥಾನ ಉಳಿಸಿಕೊಂಡಿದೆ. ಇವರ ಗೆಲುವಿಗೆ ಬಿಜೆಪಿ ಅಭಿನಂದಿಸಿದೆ. ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಅವರು ಪಕ್ಷ ಕಚೇರಿಯಲ್ಲಿ ಅವರನ್ನು ಅಭಿನಂದಿಸಿದರು.

ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ನ ಉಪಚುನಾವಣೆಯಲ್ಲಿ 114 ಮತಗಳ ಅಂತರದಿಂದ ಗೆದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಜಾತ ಜಗದೀಶ್ ಪೂಜಾರಿಯವರನ್ನು ಬಂಟ್ವಾಳ ಬಿಜೆಪಿ ಕಚೇರಿಯಲ್ಲಿ ಅಧ್ಯಕ್ಷರಾದ ದೇವಪ್ಪ ಪೂಜಾರಿ ಅಭಿನಂದಿಸಿದ್ದಾರೆ.
Be the first to comment on "ನೆಟ್ಲಮುಡ್ನೂರು: ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಉಪಚುನಾವಣೆಯಲ್ಲಿ ಗೆಲುವು"