ಬಂಟ್ವಾಳ: ಇಲ್ಲಿನ ಬಿ.ಸಿ.ರೋಡ್ ನ ಚಂಡಿಕಾನಗರದಲ್ಲಿರುವ ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ಬುಧವಾರದಿಂದ ಮೊದಲ್ಗೊಂಡು, ಫೆ.28ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರಾ ಮಹೋತ್ಸವ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಅದ್ದೂರಿಯ ಹೊರೆಕಾಣಿಕೆ ಮೆರವಣಿಗೆಗೆ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದ ಬಳಿಯಿಂದ ಬುಧವಾರ ಚಾಲನೆ ನೀಡಲಾಯಿತು.
ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿರುವ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಮಾಜಿ ಸಚಿವ ಬಿ.ರಮಾನಾಥ ರೈ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಕೇಶ್ ಮಲ್ಲಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲಯನ್ ಲೋಕನಾಥ ಶೆಟ್ಟಿ ತೆಂಗಿನಕಾಯಿ ಒಡೆಯುವ ಮೂಲಕ ಸುಮಾರು ನೂರರಷ್ಟು ಇದ್ದ ಹೊರೆಕಾಣಿಕೆ ವಸ್ತುಗಳನ್ನು ಹೊತ್ತ ವಾಹನಗಳ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ಕೈಕಂಬದ ಸಂಗ್ರಹಣಾ ಕೇಂದ್ರದವರೆಗೆ ಸಾಗಿ ಅಲ್ಲಿಂದ ಕ್ಷೇತ್ರಕ್ಕೆ ಮೆರವಣಿಗೆ ಸಾಗಿತು. ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ, ಜನಜಾಗೃತಿ ವೇದಿಕೆ ಅಧ್ಯಕ್ಷ ರೊನಾಲ್ಡ್ ಡಿಸೋಜ, ವ್ಯವಸ್ಥಾಪನಾ, ಜೀರ್ಣೋದ್ಧಾರ, ಮೊದಲಾದ ನಾನಾ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮೆರವಣಿಗೆಯಲ್ಲಿ ಹುಲಿವೇಷ, ಚೆಂಡೆ ವಾದನ, ನಾಸಿಕ್ ಬ್ಯಾಂಡ್, ಕೀಲು ಕುದುರೆ, ಚಿಲಿಪಿಲಿ ಗೊಂಬೆ ಬಳಗ,ಬ್ಯಾಂಡ್ ವಾದ್ಯಗಳ ಜೊತೆಯಲ್ಲಿ ಸಾಲು ಸಾಲು ವಾಹನಗಳ ವೈಭವದ ಹೊರೆಕಾಣಿಕೆಯ ಮೆರವಣಿಗೆ ನಡೆಯಿತು. ದೇವಳದ ವ್ಯವಸ್ಥಾಪನಾ ಸಮಿತಿಯ ಉಪಾಧ್ಯಕ್ಷ ಸದಾಶಿವ ನಾಯಕ್, ಗೌರವಾಧ್ಯಕ್ಷ ತಿಮ್ಮಪ್ಪ ರೈ ಏರಿಮಾರ್, ಕಾರ್ಯದರ್ಶಿ ಇಂದಿರೇಶ್, ಉಪಕಾರ್ಯದರ್ಶಿ ಮಂಜುನಾಥ ಪೈ, ಕೋಶಾಧಿಕಾರಿ ಐತಪ್ಪ ಆಳ್ವ, ಸದಸ್ಯರಾದ ಶ್ರೀಧರ ಮಲ್ಲಿ, ಜಯರಾಮ ಶೆಟ್ಟಿ, ಸದಾನಂದ ಶೆಟ್ಟಿ, ಗೋಪಾಲ ಸುವರ್ಣ, ಸೋಮನಾಥ ನಾಯ್ಡು, ರಮೇಶ್ ಶೆಣೈ, ಬಿ.ಮೋಹನ್, ನೇಮಿರಾಜ ಶೆಟ್ಟಿ, ರಾಜೇಶ್ ಎಲ್. ನಾಯಕ್, ದಾಸಪ್ಪ ಶೆಟ್ಟಿ, ಪ್ರಶಾಂತ್ ಭಟ್, ಜೀರ್ಣೋಧ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ಸದಾನಂದ ಶೆಟ್ಟಿ, ಸಂಜೀವ ಪೂಜಾರಿ, ಅಶ್ವನಿ ಕುಮಾರ್ ರೈ, ಚರಣ್ ಜುಮಾದಿಗುಡ್ಡೆ, ಪ್ರಮೋದ್ ಅಜ್ಜಿಬೆಟ್ಟು, ಪ್ರದೀಪ್ ರಾವ್ ಬಂಟ್ವಾಳ, ಕಾರ್ಯದರ್ಶಿ ಬಿ.ರಾಮಚಂದ್ರ ರಾವ್, ಜೊತೆ ಕಾರ್ಯದರ್ಶಿ ಶಂಕರ ಶೆಟ್ಟಿ ನಿಡ್ಯೋಡಿಗುತ್ತು, ಐತಪ್ಪ ಪೂಜಾರಿ, ಮಂಜು ವಿಟ್ಲ, ಕೋಶಾಧಿಕಾರಿ ಸಂಕಪ್ಪ ಶೆಟ್ಟಿ, ಸ್ವಾಗತ ಸಮಿತಿ ಸಂಚಾಲಕ ಸತೀಶ್ ಭಂಡಾರಿ, ಮಹಿಳಾ ವೇದಿಕೆಯ ಸಂಚಾಲಕಿ ಆಶಾ ಪಿ.ರೈ, ಪ್ರಮುಖರಾದ ಸುಷ್ಮಾ ಚರಣ್, ವೈದಿಕ ಸಮಿತಿ ಸಂಚಾಲಕ ರಾಘವೇಂದ್ರ ಬನ್ನಿಂತಾಯ, ಸಹಸಂಚಾಲಕರಾದ ಶಶಿಧರ ರಾವ್, ನರೇಶ್ ಹೊಳ್ಳ, ಪ್ರಸನ್ನ ರಾವ್, ಹೊರೆಕಾಣಿಕೆ ಸಮಿತಿ ಸಂಚಾಲಕರಾದ ಕೃಷ್ಣಪ್ಪ ಬಿ.ಕಲ್ಲಡ್ಕ, ಸಹಸಂಚಾಲಕರಾದ ಭಕ್ತಕುಮಾರ ಶೆಟ್ಟಿ, ಶಿವಾನಂದ ಮೊಡಂಕಾಪು, ಭಾಸ್ಕರ ಟೈಲರ್, ಪ್ರಶಾಂತ್ ಭಟ್ ಬಿ.ಸಿ.ರೋಡ್ ,ಸದಾಶಿವ ಕೈಕಂಬ, ಕಲಶ ಸಮಿತಿ ಸಂಚಾಲಕ ಬಿ.ಮೋಹನ್, ಸಹಸಂಚಾಲಕರಾದ ಸುರೇಖಾ ಎಂ.ಶೆಟ್ಟಿ, ಸತ್ಯನಾರಾಯಣ ರಾವ್, ಕಾರ್ಯಾಲಯ ಸಮಿತಿ ಸಂಚಾಲಕ ಐತಪ್ಪ ಪೂಜಾರಿ, ಅನ್ನಸಂತರ್ಪಣಾ ಸಮಿತಿ ಸಂಚಾಲಕ ರಾಜೇಶ್ ಎಲ್.ನಾಯಕ್, ಸಹಸಂಚಾಲಕರಾದ ಭುವನೇಶ್ ಪಚ್ಚಿನಡ್ಕ, ಉಮೇಶ್ ಗಾಂದೋಡಿ, ಚಿತ್ತರಂಜನ್ ಶೆಟ್ಟಿ, ಉದಯ ಮಲ್ಲಿ, ಜಯಾನಂದ ಕೋಟ್ಯಾನ್ ಸಹಿತ ವಿವಿಧ ಸಮಿತಿಗಳ ಸಂಚಾಲಕರು, ಸಹಸಂಚಾಲಕರು, ಸದಸ್ಯರು ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
Be the first to comment on "ಶ್ರೀ ಚಂಡಿಕಾಪರಮೇಶ್ವರಿ ದೇವಸ್ಥಾನ ಬ್ರಹ್ಮಕಲಶೋತ್ಸವ: ಅದ್ದೂರಿ ಹೊರೆಕಾಣಿಕೆ ಮೆರವಣಿಗೆ"