ಬಂಟ್ವಾಳ: ಶ್ರೀ ಕ್ಷೇತ್ರ ಕಾರಿಂಜದಲ್ಲಿ ಮಹಾಶಿವರಾತ್ರಿ ಅಂಗವಾಗಿ ಶ್ರೀ ಕ್ಷೆತ್ರ ಕಾರಿಂಜ ಸಂರಕ್ಷಣೆ ಸಂಕಲ್ಪದೊಂದಿಗೆ ಕೈಗೊಂಡ ಎರಡನೇ ವರ್ಷದ ಶಿವಮಾಲಾರಾಧನೆ ಸಂಪನ್ನಗೊಂಡಿತು.
ವಗ್ಗ ಕಾರಿಂಜಕ್ರಾಸ್ ಜಂಕ್ಷನ್ನಿಂದ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಉಳಿ ಇದರ ಸದಸ್ಯರ ಕುಣಿತ ಭಜನೆಯೊಂದಿಗೆ ಪ್ರಾರಂಭವಾದ ಶೋಭಾಯಾತ್ರೆಯನ್ನು ಜಾಗರಣಾ ವೇದಿಕೆ ಪ್ರಾಂತ ಪ್ರಮುಖರಾದ ಉಲ್ಲಾಸ್ ಕೆ.ಟಿ , ರವಿರಾಜ್ ಬಿ ಸಿ ರೋಡ್, ರವಿರಾಜ್ ಕಡಬ ಹಾಗೂ ಜಿಲ್ಲಾ ಮತ್ತು ವಿಭಾಗ ಪ್ರಮುಖರ ಉಪಸ್ಥಿತಿಯಲ್ಲಿ ನಾರಾಯಣ ಪೂಜಾರಿ ಬೊಳ್ಳುಕಲ್ಲು ಚಾಲನೆ ನೀಡಿದರು.ಕರವಾಳಿಯ ನಾನಾ ಕಡೆಗಳಿಂದ ಬಂದಿದ್ದ ಶಿವಮಾಲಾ ಧಾರಣೆ ಮಾಡಿದ ಮಾಲಾಧಾರಿಗಳು ವಗ್ಗ ಜಂಕ್ಷನ್ ನಿಂದ ಭಜನಾ ತಂಡ ಮತ್ತು ಶಿವಭಕ್ತರೊಂದಿಗೆ ಶ್ರೀ ಕಾರಿಂಜ ಕ್ಷೇತ್ರಕ್ಕೆಸಂಕೀರ್ತನಾ ಯಾತ್ರೆ ಮಾಡಿದರು. ಶಿವರಾತ್ರಿ ಜಾಗರಣೆ ಮಾಡಿ ಸೂರ್ಯೋದಯಕ್ಕೆ ಮಾಲಾ ವಿಸರ್ಜನೆಗೈದು ಅಕ್ರಮ ಗಣಿಗಾರಿಕೆ ಶಾಶ್ವತವಾಗಿ ನಿಲ್ಲುವಂತೆ ಕಾರಿಂಜೇಶ್ವರ ದೇವರ ಮಡಿಲಿನಲ್ಲಿ ಪ್ರಾರ್ಥನೆ ಮಾಡಿದರು. ಈ ಸಂದರ್ಭ ಹಿಂದು ಜಾಗರಣಾ ವೇದಿಕೆ ಪ್ರಮುಖರು ಉಪಸ್ಥಿತರಿದ್ದರು.
Be the first to comment on "ಕಾರಿಂಜದಲ್ಲಿ ಸಂರಕ್ಷಣೆಯ ಸಂಕಲ್ಪದೊಂದಿಗೆ ಶಿವಮಾಲಾಧಾರಣೆ"