ಬಂಟ್ವಾಳ: ಶನಿಯ ಬಗ್ಗೆ ಭಯಬೇಡ. ಶನಿಶ್ಚರನ ಆರಾಧನೆಯಿಂದ ಶನಿಗ್ರಹಾಚಾರ ದೂರವಾದೀತು. ಶನಿಯ ಪರಿಹಾರಕ್ಕಾಗಿ ಆರಾಧನೆ ಅಗತ್ಯ. ನಮ್ಮೊಳಗಿನ ಶತ್ರುವನ್ನು ಮೆಟ್ಟಿನಿಲ್ಲುವ ಕೆಲಸವಾಗಬೇಕು. ನಮ್ಮೊಡಲಲ್ಲಿ ರಾಗ ಧ್ವೇಷಗಳು ದೂರವಾಗಿ ಪ್ರೀತಿ ಭಾವನೆಯನ್ನು ತುಂಬಿಕೊಳ್ಳಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.
ಒಡಿಯೂರು ಸಂಸ್ಥಾನದಲ್ಲಿ ಶನಿಪ್ರದೋಷದ ಪ್ರಯುಕ್ತ ನಡೆದ ಸಾಮೂಹಿಕ ಶನೈಶ್ಚರ ಪೂಜೆಯ ಬಳಿಕ ಆಶೀರ್ವಚನ ನೀಡಿದರು. ಈಗಿನ ಕಾಲದಲ್ಲಿ ಆನ್ಲೈನ್ ಹಾಗು ಆಫ್ಲೈನ್ ನ ಬಗ್ಗೆ ಜಾಗೃತರಾಗುವ ಜೊತೆಗೆ ನಮ್ಮ ಲೈಫ್ಲೈನ್ ಬಗ್ಗೆ ಎಚ್ಚರದಿಂದಿರಬೇಕು. ಸಂಸ್ಕಾರ ಕೊಡುವ ಕೆಲಸವನ್ನು ನಮ್ಮ ಶ್ರದ್ಧಾಕೇಂದ್ರಗಳು ಮಾಡುತ್ತಿದೆ. ನಾವೆಲ್ಲರೂ ಜಾಗೃತರಾಗಬೇಕಾದ ಕಾಲಘಟ್ಟದಲ್ಲಿದ್ದೇವೆ. ಹುಟ್ಟು ಮತ್ತು ಸಾವು ಎನ್ನುವುದು ಮನುಷ್ಯ ಜೀವನದಲ್ಲಿ ಇದ್ದೇ ಇದೆ. ನಮ್ಮ ಜೀವನವನ್ನು ಸಾರ್ಥಕ್ಯವಾಗಿ ಬಳಸಿಕೊಳ್ಳುವ ಮನಸ್ಸು ನಮ್ಮದಾಗಬೇಕು. ಎಂದರು. ವೇದಮೂರ್ತಿ ಚಂದ್ರಶೇಖರ ಉಪಾಧ್ಯಯರವರ ಪೌರೋಹಿತ್ಯದಲ್ಲಿ ಶನೈಶ್ಚರ ಪೂಜೆ ನಡೆಯಿತು.
Be the first to comment on "ಒಡಿಯೂರಿನಲ್ಲಿ ಸಾಮೂಹಿಕ ಶನೈಶ್ಚರ ಪೂಜೆ"