ಚುಟುಕು ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಘಟಕ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಮತ್ತು ಗ್ರಾಮ ಪಂಚಾಯತ್ ಅಳಿಕೆ ಸಹಭಾಗಿತ್ವದಲ್ಲಿ ತಿಂಗಳ ಸಾಹಿತ್ಯ ಸಂಭ್ರಮ ಅಳಿಕೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಚುಟುಕು ಸಾಹಿತ್ಯ ಪರಿಷತ್ತಿನ ಬಂಟ್ವಾಳ ಘಟಕಾಧ್ಯಕ್ಷ ಆನಂದ ರೈ ಅಡ್ಕಸ್ಥಳ ವಹಿಸಿದ್ದ ಕಾರ್ಯಕ್ರಮವನ್ನು ಅಳಿಕೆ ಗ್ರಾಪಂ ಪಿಡಿಒ ಜಿನ್ನಪ್ಪ ಗೌಡ ಉದ್ಘಾಟಿಸಿದರು.
ಉಪನ್ಯಾಸ, ಸನ್ಮಾನ, ಚಿಗುರು ಪ್ರತಿಭೆಗಳ ಸಹಿತ ಕವಿಗೋಷ್ಠಿ ನಡೆದವು. ತುಳುನಾಡಿನಲ್ಲಿ ಕೆಡ್ಡಸ ಆಚರಣೆ ಎಂಬ ವಿಷಯದ ಬಗ್ಗೆ ರಂಗ ನಿರ್ದೇಶಕರು ಮತ್ತು ಶಿಕ್ಷಕರಾದ ಉದಯ ಸಾರಂಗ್ ಮಾತನಾಡಿದರು. ವಿಶ್ರಾಂತ ಉಪನ್ಯಾಸಕ ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದರಾದ ಡಾ. ಪೂವಪ್ಪ ಶೆಟ್ಟಿ ಅಳಿಕೆ ಅವರನ್ನುಸನ್ಮಾನಿಸಲಾಯಿತು. ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸರಸ್ವತಿ. ಸಿ , ಪಂಚಾಯಿತಿ ಮಾಜಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಶ್ರೀ ಸತ್ಯಸಾಯಿ ಪದವಿಪೂರ್ವ ಕಾಲೇಜು ಅಳಿಕೆಯ ವಿಶ್ರಾಂತ ಕನ್ನಡ ಉಪನ್ಯಾಸಕರಾದ ಶ್ರೀಧರ್, ಶ್ರೀ ಸತ್ಯಸಾಯಿ ಲೋಕಸೇವಾ ಹಿರಿಯ ಪ್ರಾಥಮಿಕ ಶಾಲೆ ಅಳಿಕೆಯ ಮುಖ್ಯೋಪಾಧ್ಯಾಯರಾದ ಈಶ್ವರ ನಾಯ್ಕ ಎಸ್ ಶುಭ ಹಾರೈಸಿದರು.ಚುಟುಕು ಸಾಹಿತ್ಯ ಪರಿಷತ್ತು ಬಂಟ್ವಾಳ ಘಟಕದ ಜತೆ ಕಾರ್ಯದರ್ಶಿ ಶ್ರೀಕಲಾ ಬಿ ಕಾರಂತ್ ಎರುಂಬು ಪ್ರಾಸ್ತಾವಿಕ ಮಾತನಾಡಿದರು. ನಾರಾಯಣ ಕುಂಬ್ರ ಸ್ವಾಗತಿಸಿದರು. ಅಪೂರ್ವ ಕಾರಂತ್ ಹಾಗೂ ರಶ್ಮಿತಾ ಸುರೇಶ್ ನಿರೂಪಿಸಿದರು. ಕಾವ್ಯಶ್ರೀ ಅಳಿಕೆ ಧನ್ಯವಾದ ಸಮರ್ಪಿಸಿದರು. ಬಳಿಕ ತುಳು ಮತ್ತು ಕನ್ನಡ ಭಾಷಾ ಹಿರಿಯ ಸಾಹಿತಿಗಳಾದ ಚೆನ್ನಪ್ಪ ಅಳಿಕೆ ಅಧ್ಯಕ್ಷತೆಯಲ್ಲಿ ನಡೆದ ಚಿಗುರು ಪ್ರತಿಭೆಗಳ ಸಹಿತ ಕವಿಗೋಷ್ಠಿಗೆ ಚುಟುಕು ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಹರೀಶ್ ಸುಲಾಯ ಒಡ್ಡಂಬೆಟ್ಟು ಚಾಲನೆ ನೀಡಿದರು.
ಸುಮಾರು 30 ಕವಿಗಳು ಸ್ವರಚಿತ ಕವನಗಳನ್ನು ಪ್ರಸ್ತುತಪಡಿಸಿದರು. ಸಾಹಿತ್ಯ ಪೋಷಕರಾದ ಬಾಲಕೃಷ್ಣ ಎರುಂಬು ಉಪಸ್ಥಿತರಿದ್ದರು. ಚುಟುಕು ಸಾಹಿತ್ಯ ಪರಿಷತ್ತು, ಬಂಟ್ವಾಳ ತಾಲೂಕು ಘಟಕದ ಉಪಾಧ್ಯಕ್ಷರಾದ ಅಶೋಕ್ ಎನ್ ಕಡೆಶಿವಾಲಯ ಸ್ವಾಗತಿಸಿ, ಸದಸ್ಯರಾದ ವಿಶ್ವನಾಥ ಕುಲಾಲ್ ಮಿತ್ತೂರು ವಂದಿಸಿದರು. ಸಾಹಿತ್ಯ ಪೋಷಕರಾದ ಬಾಲಕೃಷ್ಣ ಎರುಂಬು ದಂಪತಿಗಳನ್ನು ಇದೇ ವೇಳೆ ಗೌರವಿಸಲಾಯಿತು ಚುಟುಕು ಸಾಹಿತ್ಯ ಪರಿಷತ್ತು ಬಂಟ್ವಾಳ ಘಟಕದ ಪ್ರಧಾನ ಕಾರ್ಯದರ್ಶಿ ಜಯರಾಮ ಪಡ್ರೆ ಜತೆ ಕಾರ್ಯದರ್ಶಿ ವಿಂಧ್ಯಾ ಎಸ್ ರೈ ಕವಿಗೋಷ್ಠಿಯನ್ನು ನಿರ್ವಹಿಸಿದರು. ಧನ್ವಿತಾ ಕಾರಂತ್ ಮತ್ತು ಶೀರ್ಷಿತಾ ಕಾರಂತ್ ಪ್ರಾರ್ಥಿಸಿದರು. ಬಳಗದ ಸದಸ್ಯರಾದ ಹಿತೇಶ್ ಕುಮಾರ್ ಎ ಸನ್ಮಾನ ಪತ್ರ ವಾಚಿಸಿದರು.
Be the first to comment on "ಅಳಿಕೆಯಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ತಿಂಗಳ ಸಾಹಿತ್ಯ ಸಂಭ್ರಮ"