ಬಂಟ್ವಾಳ: ಅನಿರ್ಬಂಧಿತ ಶೇ.5 ರ ಯೋಜನೆಯಡಿಯಲ್ಲಿ 15.52 ಲಕ್ಷ ರೂ ಮೌಲ್ಯದ ವಿವಿಧ ಸವಲತ್ತುಗಳನ್ನು 78 ವಿಕಲಚೇತನ ಫಲಾನುಭವಿಗಳಿಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬಂಟ್ವಾಳ ತಾ.ಪಂ.ನ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ಫೆ.3 ರಂದು ಗುರುವಾರ ವಿತರಿಸಿದರು.
ಈ ಸಂದರ್ಭ ಮಾತನಾಡಿದ ಅವರು ಸರಕಾರ ವಿಕಲಚೇತನರಿಗೆ ಗರಿಷ್ಠ ಪ್ರಮಾಣದ ಸವಲತ್ತುಗಳನ್ನು ನೀಡುತ್ತಾ ಬಂದಿದ್ದು, ನೇರವಾಗಿ ತಲುಪಿಸುವ ಮೂಲಕ ತನ್ನ ಬದ್ದತೆಯನ್ನು ಮೆರೆದಿದೆ. ಇಂದು 23 ಶ್ರವಣ ಸಾಧನ, 7 ಗಾಲಿ ಕುರ್ಚಿ, 5 ವಾಟರ್ ಬೆಡ್ , 4 ಹೊಲಿಗೆ ಯಂತ್ರ, ಹಾಗೂ ಇಬ್ಬರಿಗೆ ತಲಾ 2.3 ಲಕ್ಷದ ಕೃತಕ ಕಾಲು ಜೋಡಣೆ ಸೌಲಭ್ಯ ನೀಡಲಾಗಿದೆ ಎಂದರು ಈ ಸಂದರ್ಭದಲ್ಲಿ ತಾ.ಪಂ.ಇ.ಒ.ರಾಜಣ್ಣ, ಸಿಬ್ಬಂದಿ ಗಳಾದ ಕುಶಾಲಪ್ಪ, ಚಂದ್ರಾವತಿ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಬಂಟ್ವಾಳ ತಾಲೂಕು ಪಂಚಾಯಿತಿಯಲ್ಲಿ ವಿಕಲಚೇತನರಿಗೆ ಶಾಸಕ ರಾಜೇಶ್ ನಾಯ್ಕ್ ಅವರಿಂದ ಸವಲತ್ತು ವಿತರಣೆ"