ಬಂಟ್ವಾಳ: ಶ್ರೀರಾಮಚಂದ್ರಾಪುರ ಮಠದ ಅಂಗಸಂಸ್ಥೆಯಾಗಿರುವ ಕಲ್ಲಡ್ಕ ಗೇರುಕಟ್ಟೆ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಮಾರ್ಗದರ್ಶನದಲ್ಲಿ ಶ್ರೀದೇವರ ಪ್ರತಿಷ್ಠಾ ಬ್ರಹ್ಮಕಲಶದ ಹತ್ತನೇ ವರ್ಧಂತ್ಯುತ್ಸವವು ನವಚಂಡಿಕಾ ಹವನದೊಂದಿಗೆ ನಡೆಯಿತು.
ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ದೇಶದ ಕಣಕಣದಲ್ಲಿ ದೈವ-ದೇವರು ಇರುವ ನಂಬಿಕೆ ಇದೆ. ಸತ್ಕರ್ಮದಲ್ಲಿ ಪುಣ್ಯವಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, 232 ಧಾರ್ಮಿಕ ಕ್ಷೇತ್ರಗಳಿಗೆ ತೆರಳುವ ರಸ್ತೆಗಳನ್ನು ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲಾಗಿದೆ ಎಂದರು. ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಗಣೇಶಮೋಹನ ಕಾಶಿಮಠ ಉಪಸ್ಥಿತರಿದ್ದರು.
ಸೇವಾ ಸಮಿತಿ ಅಧ್ಯಕ್ಷ ರಾಕೋಡಿ ಈಶ್ವರ ಭಟ್ ಪ್ರಸ್ತಾಪಿಸಿ, ಸ್ವಾಗತಿಸಿದರು. ಕಾರ್ಯದರ್ಶಿ ಪಿ.ಶ್ಯಾಮ ಭಟ್ ಲೆಕ್ಕಪತ್ರ ಮಂಡಿಸಿದರು. ಮುರಳಿಕೃಷ್ಣ ಕುಕ್ಕಿಲ ಕಾರ್ಯಕ್ರಮ ನಿರೂಪಿಸಿದರು. ಅಮೈ ಜನಾರ್ದನ ಭಟ್ ವಂದಿಸಿದರು.
ನಡಿಬೈಲು ಶಂಕರನಾರಾಯಣ ಭಟ್ ನೇತೃತ್ವದಲ್ಲಿ ನವಕ ಕಲಶಾಭಿಷೇಕ, ಬೆಳಗ್ಗೆ ಚಂಡೀ ಸಪ್ತಶತೀ ಪಾರಾಯಣ, ಗಣಪತಿ ಹವನ, ವೇ.ಮೂ.ಅಮೈ ಶಿವಪ್ರಸಾದ ಭಟ್ ವೇ.ಮೂ ಕೇಕಣಾಜೆ ಗಣಪತಿ ಭಟ್ ಅವರ ನೇತೃತ್ವದಲ್ಲಿ ನವಚಂಡಿಕಾ ಹವನ, ಶತರುದ್ರ ಜಪ, ತಂಬಿಲ, ಮಾತೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ಶತರುದ್ರ ಕಲಶಾಭಿಷೇಕ, ಯಾಗದ ಪೂರ್ಣಾಹುತಿ ನೆರವೇರಿತು.
Be the first to comment on "ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಪ್ರತಿಷ್ಠಾ ಕಲಶದ ಹತ್ತನೇ ವರ್ಧಂತ್ಯುತ್ಸವ"