ಬಂಟ್ವಾಳ: ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ದೇಶದ ಯುವನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೊ ಸಮಾರೋಪ ಸಮಾರಂಭ ಕಾರ್ಯಕ್ರಮದ ಪ್ರಯುಕ್ತ ರಾಷ್ಟ್ರಧ್ವಜಾರೋಹಣ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನಡೆಯಿತು.
೩೭೯೦ ಕಿ.ಮೀ ಕನ್ಯಾಕುಮಾರಿ-ಕಾಶ್ಮೀರ ಪಾದಯಾತ್ರೆಯ ಮುಖಾಂತರ ಕ್ರಮಿಸಿ ಜಾತಿ-ಜಾತಿಯ ಮಧ್ಯೆ, ಧರ್ಮ ಧರ್ಮದ ಮಧ್ಯೆ ಪ್ರೀತಿಯ ಹೃದಯವನ್ನು ಜೋಡಿಸುವ ಹಾಗೂ ಭಾರತವನ್ನು ಬಲಿಷ್ಠಗೊಳಿಸುವಲ್ಲಿ ಭಾರತ್ ಜೋಡೊ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ರಮಾನಾಥ ರೈ ತಿಳಿಸಿದರು.
ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಾಯಿಲಪ್ಪ ಸಾಲ್ಯಾನ್, ವಾಸು ಪೂಜಾರಿ ಲೋರೆಟ್ಟೋ, ಜನಾರ್ದನ ಚೆಂಡ್ತಿಮಾರ್, ಪುರಸಭಾ ಸದಸ್ಯರಾದ ಗಂಗಾಧರ ಪೂಜಾರಿ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಜೋರ, ಮಹಿಳಾ ಕಾಂಗ್ರೆಸ್ ಅಧ್ಯಕ್ಯರಾದ ಲವೀನಾ ವಿಲ್ಮ ಮೋರಸ್, ಬ್ಲಾಕ್ ಕಾಂಗೆಸ್ ಉಪಾಧ್ಯಕ್ಷರಾದ ಸುಧಾಕರ ಶೆಣೈ, ಜಗದೀಶ್ ಕೊಯ್ಲ, ಮುಖಂಡರಾದ ಮಹಾಬಲ ಬಂಗೇರ, ಜಗನ್ನಾಥ ತುಂಬೆ, ಉಮೇಶ್ ಕುಲಾಲ್, ರಿಯಾಝ್ ಬಂಟ್ವಾಳ, ನಿತ್ಯಾನಂದ ಕಲಾಯಿ, ಅಮ್ಮು ಅರ್ಭಿಗುಡ್ಡೆ, ನಾರಯಣ ನೇರಂಬೋಳ್, ಮನೋಹರ್ ನೇರಂಬೊಳ್, ಜಯಕರ ಶೆಟ್ಟಿ, ಮಹಮ್ಮದ್ ಸಂಗಬೆಟ್ಟು, ವೆಂಕಪ್ಪ ಪೂಜಾರಿ, ದೀನೇಶ್ ಶೆಟ್ಟಿಗಾರ್, ಆಶೋಕ್ ಆಚಾರ್ಯ, ವಸಂತಿ ಚಂದಪ್ಪ, ವಲಾರ್ ಬಟ್ಟಕಟ್ಟೆ, ಅಬ್ದುಲ್ ರಹೀಮಾನ್, ಚಂದ್ರಶೇಖರ್ ಆಚಾರ್ಯ, ಪದ್ಮನಾಭ ಸಾವಂತ್, ರಿಚರ್ಡ್ ಮಿನೇಜಸ್, ರಿಯಾಝ್ ಕೆಳಗಿನ ಪೇಟೆ, ಸಂಜೀವ ಚೆಂಡ್ತಿಮಾರ್ ಉಪಸ್ಥಿತರಿದ್ದರು.
Be the first to comment on "ಜನತೆಯ ಹೃದಯವನ್ನು ಜೋಡಿಸುವ ಭಾರತ್ ಜೋಡೊ ಕಾರ್ಯಕ್ರಮ: ಬಿ.ರಮಾನಾಥ ರೈ"