ನಾಳೆ ಬಸ್ತಿಪಡ್ಪುವಿನಲ್ಲಿ ಸಂಜೆ ನಡೆಯಲಿರುವ ಗ್ರಾಮವಿಕಾಸ ಯಾತ್ರೆ ಸಮಾರೋಪಕ್ಕೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಪೊಲೀಸ್ ಎಸ್ಪಿ ಅಣ್ಣಾಮಲೈ ಆಗಮಿಸಲಿದ್ದಾರೆ. ಮಧ್ಯಾಹ್ನ 2 ರ ಬಳಿಕ ಕೈಕಂಬ ಜಂಕ್ಷನ್ ನಿಂದ ಬಂಟ್ವಾಳ ಬಸ್ತಿಪಡ್ಪುವಿನವರೆಗೆ ಬೃಹತ್ ಯಾತ್ರೆ ನಡೆಯಲಿದ್ದು, ಬಳಿಕ 4 ಗಂಟೆಗೆ ನಡೆಯುವ ಯಾತ್ರೆ ಸಮಾರೋಪಕ್ಕೆ ಬಿಜೆಪಿಯ ಘಟಾನುಘಟಿಗಳು ಆಗಮಿಸಲಿದ್ದಾರೆ. ಬಂಟ್ವಾಳದ ಬಸ್ತಿಪಡ್ಪುವಿನ ವಿಶಾಲವಾದ ಮೈದಾನದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ರಾಷ್ಟ್ರೀಯ ಮುಖಂಡ ಸಿ.ಟಿ.ರವಿ ಮತ್ತು ತಮಿಳುನಾಡು ರಾಜ್ಯಾಧ್ಯಕ್ಷ ಅಣ್ಣಾಮಲೈ ಭಾಗವಹಿಸಲಿದ್ದು, ಸಾವಿರಾರು ಮಂದಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಸೂಪರ್ ಕಾಪ್ ಎಂದು ಖ್ಯಾತಿಯಾಗಿದ್ದ ಅಣ್ಣಾಮಲೈ ಈಗ ರಾಜಕಾರಣಿಯಾಗಿ ಬದಲಾಗಿದ್ದು, ಈಗಾಗಲೇ ಹಲವು ವಿಚಾರಗಳಿಂದ ಸುದ್ದಿಯಲ್ಲಿದ್ದಾರೆ.
Be the first to comment on "ನಾಳೆ ಬಂಟ್ವಾಳದ ಬಸ್ತಿಪಡ್ಪುವಿನಲ್ಲಿ ನಡೆಯಲಿರುವ ಗ್ರಾಮವಿಕಾಸ ಯಾತ್ರೆ ಸಮಾರೋಪಕ್ಕೆ ಅಣ್ಣಾಮಲೈ"