ಬಂಟ್ವಾಳ: ಮಾನವ ಬಂಧುತ್ವ ವೇದಿಕೆಯ ಬಂಟ್ವಾಳ ತಾಲೂಕು ಸಮಿತಿ ಹಾಗೂ ಸ್ವಾಗತ ಸಮಿತಿ ವತಿಯಿಂದ ಸಂವಿಧಾನ ಅರಿವಿನ ಹಬ್ಬ ವಿಚಾರಗೋಷ್ಠಿ ಕಾರ್ಯಕ್ರಮ ಬಂಟ್ವಾಳದ ಸ್ಪರ್ಶ ಕಲಾಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಚಿಂತಕ ಡಾ.ಸಿದ್ದನಗೌಡ ಪಾಟೀಲ ಉದ್ಘಾಟಿಸಿ ಮಾತನಾಡಿ, ಸಂವಿಧಾನದ ಅಪಾಯಕಾರಿ ಸ್ಥಿತಿಯ ಕುರಿತು ಜನರಿಗೆ ತಿಳಿಸಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಿದೆ ಎಂದರು.
ಮಡಿಕೇರಿಯ ನ್ಯಾಯವಾದಿ ಕೆ.ಆರ್.ವಿದ್ಯಾಧರ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿಭಾಗೀಯ ಸಂಚಾಲಕ ಸತೀಶ್‌ಕುಮಾರ್ ಮಾತನಾಡಿ, ಎನ್‌ಇಪಿ ಜಾರಿ, ಗೋಹತ್ಯಾ ನಿಷೇಧ ಕಾಯ್ದೆ ದೇಶಕ್ಕೆ ಅಪಾಯಕಾರಿಯಾಗಿದ್ದು, ಮಾಹಿತಿಯ ಕೊರತೆಯ ಪರಿಣಾಮ ಇದು ಜನರಿಗೆ ಅರ್ಥವಾಗುತ್ತಿಲ್ಲ ಎಂದರು. ಶಿಕ್ಷಣ ತಜ್ಞ ಶ್ರೀಪಾದ ಭಟ್, ವೇದಿಕೆ ಬಂಟ್ವಾಳದ ಸಂಚಾಲಕ ಕೇಶವ ಪೂಜಾರಿ ಪಂಜಿಕಲ್ಲು, ಸ್ವಾಗತ ಸಮಿತಿಯ ಅಧ್ಯಕ್ಷ ಮೋಹನ ಶೆಟ್ಟಿ ಪಂಜಿಕಲ್ಲು ಮೊದಲಾದವರು ಉಪಸ್ಥಿತರಿದ್ದರು.ಪವಿತ್ರ ಅವರು ಸಂವಿಧಾನದ ಆಶಯಗಳನ್ನು ಸಭೆಗೆ ಮಂಡಿಸಿದರು. ಸಮಾರಂಭದ ಸ್ವಾಗತ ಸಮಿತಿ ಕೋಶಾಧಿಕಾರಿ ಬಿ.ಶೇಖರ್ ಸ್ವಾಗತಿಸಿ, ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಕಾರ್ಯಕ್ರಮ ನಿರೂಪಿದರು.
Be the first to comment on "ಮಾನವ ಬಂಧುತ್ವ ವೇದಿಕೆಯಿಂದ ಸಂವಿಧಾನ ಅರಿವಿನ ಹಬ್ಬ"