ಶಾಸಕ ರಾಜೇಶ್ ನಾಯ್ಕ್ ಗ್ರಾಮವಿಕಾಸ ಯಾತ್ರೆಗೆ ಸಕಲ ಸಿದ್ಧತೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಉದ್ಘಾಟನೆ, ರಾಜ್ಯ, ನೆರೆರಾಜ್ಯದ ಪ್ರಮುಖ ನಾಯಕರು ಭಾಗಿ

ಜಾಹೀರಾತು

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಜನವರಿ 14ರಿಂದ 26ರವರೆಗೆ 13 ದಿನಗಳ ಗ್ರಾಮ ವಿಕಾಸ ಯಾತ್ರೆ – ಗ್ರಾಮದೆಡೆಗೆ ಶಾಸಕರ ನಡಿಗೆ ಪರಿಕಲ್ಪನೆಯಡಿ ಪಾದಯಾತ್ರೆಯನ್ನು ಜ.14ರ ಮಧ್ಯಾಹ್ನ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಿಂದ ಆರಂಭಿಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಗ್ರಾಮವಿಕಾಸ ಯಾತ್ರೆಯನ್ನು ಉದ್ಘಾಟಿಸಲಿದ್ದಾರೆ. ವಿಧಾನಸಭೆಯ ಬಂಟ್ವಾಳ ಕ್ಷೇತ್ರದುದ್ದಕ್ಕೂ ಯಾತ್ರೆ ಸಂಚರಿಸಲಿದ್ದು, ಜನವರಿ 26ರಂದು ಬಿ.ಸಿ.ರೋಡ್ ನಲ್ಲಿ ಸಮಾರೋಪ ನಡೆಯಲಿದೆ. ಅಂದು ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಹಿತ ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ. ಈ ಕುರಿತು ಗ್ರಾಮವಿಕಾಸ ಯಾತ್ರೆ ಸಂಚಾಲಕ ಬುಡ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಮಾಹಿತಿ ನೀಡಿದರು. ವಿವರ ಇಲ್ಲಿದೆ.

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉಪಸ್ಥಿತಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಯಾತ್ರೆ ಸಂಚಾಲಕ, ಬುಡಾ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಸಹಸಂಚಾಲಕ ಮಾಧವ ಮಾವೆ, ಸುದರ್ಶನ ಬಜ, ಕ್ಷೇತ್ರ ಉಪಾಧ್ಯಕ್ಷ ರೊನಾಲ್ಡ್ ಡಿಸೋಜ, ಒಳಚರಂಡಿ ನಿಗಮ ಸದಸ್ಯೆ ಸುಲೋಚನಾ ಜಿ.ಕೆ.ಭಟ್, ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ರವೀಶ ಶೆಟ್ಟಿ ಕರ್ಕಳ, ಡೊಂಬಯ್ಯ ಅರಳ, ಪ್ರಮುಖರಾದ ಪುರುಷೋತ್ತಮ ಶೆಟ್ಟಿ ವಾಮದಪದವು, ರಮನಾಥ ರಾಯಿ, ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

ಯಾತ್ರೆಯ ದಾರಿ: 14ರಂದು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಿಂದ,  ತೆಂಕಬೆಳ್ಳೂರು ಕಾವೇಶ್ವರ ದೇವಸ್ಥಾನವರೆಗೆ ಕರಿಯಂಗಳ, ಬಡಗಬೆಳ್ಳೂರು ಗ್ರಾಮಗಳು, 15ರಂದು  ನಂದಾವರ ದೇವಸ್ಥಾನದಿಂದ, ವಿಟ್ಲಪಡ್ನೂರು ಕಾಪುಮಜಲು ಮಲರಾಯ ದೈವಸ್ಥಾನದವರೆಗೆ ಸಜಿಪಮುನ್ನೂರು, ಸಜಿಪಮೂಡ, ಮಂಚಿ, ಸಾಲೆತ್ತೂರು, ಕೊಳ್ನಾಡು, ವಿಟ್ಲಪಡ್ನೂರು ಗ್ರಾಮಗಳು,  16ರಂದು ಕರೋಪಾಡಿ, ಕನ್ಯಾನ ಗ್ರಾಮಗಳಲ್ಲಿ ವಗೆನಾಡು ದೇವಸ್ಥಾನದಿಂದ ಮಿತ್ತನಡ್ಕ ಮಲರಾಯ ಪಿಲಿಚಾಮುಂಡಿ ದೈವಸ್ಥಾನದವರೆಗೆ, 17ರಂದು ವೀರಕಂಭ ಕೆಲಿಂಜ ಉಳ್ಳಾಲ್ತಿ ದೈವಸ್ಥಾನದಿಂದ ಪೆರಾಜೆ ಸಾದಿಕುಕ್ಕು ಗುಡ್ಡೆಚಾಮುಂಡಿ ದೈವಸ್ಥಾನದವರೆಗೆ ವೀರಕಂಭ, ಅನಂತಾಡಿ, ನೆಟ್ಲಮುಡ್ನೂರು, ಮಾಣಿ, ಪೆರಾಜೆ ಗ್ರಾಮಗಳು, 18ರಂದು ಕಡೇಶ್ವಾಲ್ಯ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಿಂದ ಗೋಳ್ತಮಜಲು ಕಲ್ಲಡ್ಕ ಶ್ರೀರಾಮ ಮಂದಿರದವರೆಗೆ, ಕಡೇಶ್ವಾಲ್ಯ, ಬರಿಮಾರು, ಗೋಳ್ತಮಜಲು ಗ್ರಾಮಗಳು, 19ರಂದು ಅಮ್ಟೂರು, ಪಾಣೆಮಂಗಳೂರು, ನರಿಕೊಂಬು, ಶಂಬೂರು, ಬಾಳ್ತಿಲ ಗ್ರಾಮಗಳು ಶ್ರೀಕೃಷ್ಣಭಜನಾಮಂದಿರ ಅಮ್ಟೂರಿನಿಂದ ಬಾಳ್ತಿಲ ನೀರಪಾದೆ ರಕ್ತೇಶ್ವರಿ ಮಹಮ್ಮಾಯಿ ದೇವಸ್ಥಾನದವರೆಗೆ, 20ರಂದು ಬಂಟ್ವಾಳ ತಿರುಮಲ ವೆಂಕಟರಮಣ ದೇವಸ್ಥಾನದಿಂದ ಸರಪಾಡಿ ಶರಭೇಶ್ವರ ದೇವಸ್ಥಾನದವರೆಗೆ ಬಂಟ್ವಾಳ ಕಸಬಾ, ನಾವೂರು, ದೇವಸ್ಯಪಡೂರು, ದೇವಸ್ಯಮುಡೂರು, ಸರಪಾಡಿ ಗ್ರಾಮಗಳು, 21ರಂದು ಮಣಿನಾಲ್ಕೂರು, ಉಳಿ, ತೆಂಕಕಜೆಕಾರು, ಬಡಗಕಜೆಕಾರು ಗ್ರಾಮಗಳು ಇಳಿಯೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಬ್ರಹ್ಮಬೈದರ್ಕಳ ಗರಡಿ ಪಾಂಡವರಕಲ್ಲುವರೆಗೆ, 22ರಂದು ಪುಂಜಾಲಕಟ್ಟೆ ಗೋಪಾಲಕೃಷ್ಣ ದೇವಸ್ಥಾನದಿಂದ ಸಿದ್ಧಕಟ್ಟೆ ನಾರಾಯಣಗುರು ಮಂದಿರದವರೆಗೆ ಪಿಲಾತಬೆಟ್ಟು, ಇರ್ವತ್ತೂರು, ಮೂಡುಪಡುಕೋಡಿ, ಕೊಡಂಬೆಟ್ಟು, ಪಿಲಿಮೊಗರು, ಅಜ್ಜಿಬೆಟ್ಟು, ಚೆನ್ನೈತೋಡಿ, ಕುಕ್ಕಿಪ್ಪಾಡಿ, ಎಲಿಯನಡುಗೋಡು, ಸಂಗಬೆಟ್ಟು ಗ್ರಾಮಗಳು, 23ರಂದು ಕಾರಿಂಜ ಕ್ಷೇತ್ರದಿಂದ ಮಾವಂತೂರು ಕೊಯಿಲ ಮಹಾಗಣಪತಿ ದೇವಸ್ಥಾನದವರೆಗೆ, ಕಾವಳಮುಡೂರು, ಕಾವಳಪಡೂರು, ಕಾಡಬೆಟ್ಟು,ಮೂಡುನಡುಗೋಡು, ಬುಡೋಳಿ, ಪಂಜಿಕಲ್ಲು, ಕೊಯಿಲ, ರಾಯಿ ಗ್ರಾಮಗಳು, 24ರಂದು ಕರ್ಪೆ, ಅರಳ, ಬಡಗಬೆಳ್ಳೂರು, ಕುರಿಯಾಳ ಕರ್ಪೆ ಕುಪ್ಪೆಟ್ಟು ಬರ್ಕೆ ಪಂಜುರ್ಲಿ ಮೂಲಸ್ಥಾನದಿಂದ ಓಂಕಾರೇಶ್ವರಿ ಭಜನಾ ಮಂದಿರ ಕುರಿಯಾಳ, 25ರಂದು ಅಮ್ಟಾಡಿ, ಅಮ್ಮುಂಜೆ, ಕಳ್ಳಿಗೆ ಗ್ರಾಮಗಳು ಮಂಗ್ಲಿಮಾರ್ ಶ್ರೀ ಅಣ್ಣಪ್ಪ ದೈವಸ್ಥಾನದಿಂದ ಕಳ್ಳಿಗೆ ದೇವಂದಬೆಟ್ಟು ದೇವಸ್ಥಾನದವರೆಗೆ, 26ರಂದು ಬಿ.ಸಿ.ರೋಡ್ ಕೈಕಂಬ ಪೊಳಲಿ ಮಹಾದ್ವಾರದಿಂದ ಬಿ.ಸಿ.ರೋಡ್ ನಲ್ಲಿ ಸಮಾರೋಪ.

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉಪಸ್ಥಿತಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಯಾತ್ರೆ ಸಂಚಾಲಕ, ಬುಡಾ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಮಾಹಿತಿ ನೀಡಿ, ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದು, ಪ್ರತಿದಿನ ಸರಾಸರಿ 30 ಕಿ.ಮೀ.ನಷ್ಟು ದೂರ ಕಾಲ್ನಡಿಗೆ ಕೈಗೊಳ್ಳಲಿರುವ ಶಾಸಕರು, ಜನರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದರು. ಜನವರಿ 26ರಂದು ಬಿ.ಸಿ.ರೋಡ್ ನಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಈ ಸಂದರ್ಭ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸುವ ನಿರೀಕ್ಷೆ ಇದೆ ಎಂದರು.

ಜಾಹೀರಾತು

ಹೇಗಿರುತ್ತದೆ ಯಾತ್ರೆ: ಬೆಳಗ್ಗೆ 8ಕ್ಕೆ ಯಾತ್ರೆ ಆರಂಭವಾಗಲಿದ್ದು, ಸಂಜೆ ಸಭೆ ನಡೆಯಲಿದೆ. ಯಾತ್ರೆಯುದ್ದಕ್ಕೂ ಗ್ರಾಮದಲ್ಲೇ ವಾಸ್ತವ್ಯ ಹೂಡಲಿರುವ ಶಾಸಕರು, ಬೆಳಗ್ಗೆ ಧಾರ್ಮಿಕ ಕೇಂದ್ರವೊಂದರಿಂದ ಹೊರಟು ಸಂಜೆ ಧಾರ್ಮಿಕ ಕೇಂದ್ರದ ಆವರಣದಲ್ಲಿ ಸಮಾಪ್ತಿಗೊಳಿಸಲಿದ್ದಾರೆ. ಸಂಜೆ ವೇಳೆ ಬಹಿರಂಗ ಸಭೆಯ ಜೊತೆ ಕೆಲವೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ಇರಲಿವೆ. ಅಭಿವೃದ್ಧಿಯ ಯಶೋಗಾಥೆಯನ್ನು ಜನರಿಗೆ ಮುಟ್ಟಿಸುವ ದೃಶ್ಯಾವಳಿಯನ್ನು ಯಾತ್ರೆ ಸಂದರ್ಭ ಪ್ರದರ್ಶಿಸಲಾಗುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಗುಜರಾತ್ ಚುನಾವಣೆಯಲ್ಲಿ ಬಳಸಿದ ಪ್ರಚಾರ ರಥವನ್ನು ಬಳಸಲಾಗುತ್ತದೆ ಎಂದು ದೇವದಾಸ ಶೆಟ್ಟಿ ಮಾಹಿತಿ ನೀಡಿದರು. ಉದ್ಘಾಟನೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಆಗಮಿಸಿದರೆ, ಯಾತ್ರೆಯುದ್ದಕ್ಕೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಅಂಗಾರ, ಅಶ್ವತ್ಥನಾರಾಯಣ, ಪ್ರಮುಖರಾದ ಅಣ್ಣಾಮಲೈ, ಸಿ.ಟಿ.ರವಿ, ಜಗ್ಗೇಶ್, ಸುರೇಂದ್ರನ್ ಸಹಿತ ರಾಜ್ಯ ಹಾಗೂ ನೆರೆಯ ರಾಜ್ಯಗಳ ನಾಯಕರು ಆಗಮಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಸಹಸಂಚಾಲಕ ಮಾಧವ ಮಾವೆ, ಸುದರ್ಶನ ಬಜ, ಕ್ಷೇತ್ರ ಉಪಾಧ್ಯಕ್ಷ ರೊನಾಲ್ಡ್ ಡಿಸೋಜ, ಒಳಚರಂಡಿ ನಿಗಮ ಸದಸ್ಯೆ ಸುಲೋಚನಾ ಜಿ.ಕೆ.ಭಟ್, ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ರವೀಶ ಶೆಟ್ಟಿ ಕರ್ಕಳ, ಡೊಂಬಯ್ಯ ಅರಳ, ಪ್ರಮುಖರಾದ ಪುರುಷೋತ್ತಮ ಶೆಟ್ಟಿ ವಾಮದಪದವು, ರಮನಾಥ ರಾಯಿ, ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಗುಜರಾತ್ ಚುನಾವಣೆಯಲ್ಲಿ ಬಳಸಿದ ಪ್ರಚಾರ ರಥವನ್ನು ಬಳಸಲಾಗುತ್ತದೆ

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು

About the Author

Bantwal News
2016 ನವೆಂಬರ್ 10ರಂದು ಆರಂಭಗೊಂಡ ಬಂಟ್ವಾಳದ ಮೊದಲ ವೆಬ್ ಪತ್ರಿಕೆ ಇದು. 25 ಲಕ್ಷಕ್ಕಿಂತಲೂ ಅಧಿಕ ಮಂದಿ ಕೇವಲ 45 ತಿಂಗಳಲ್ಲೇ ಓದಿದ ಜಾಲತಾಣವಿದು. ಸಂಪಾದಕ: ಹರೀಶ ಮಾಂಬಾಡಿ. ಬ್ರೇಕಿಂಗ್ ನ್ಯೂಸ್ ಧಾವಂತದಲ್ಲಿ ಅವಸರದ ಸುದ್ದಿ ಕೊಡದೆ, ಮಾಹಿತಿ ಖಚಿತಗೊಂಡ ಬಳಿಕವಷ್ಟೇ ಪ್ರಕಟಿಸಲಾಗುತ್ತದೆ. ಅತಿರಂಜಿತ ಸುದ್ದಿ ಇಲ್ಲಿಲ್ಲ. ಇದು www.bantwalnews.com ಧ್ಯೇಯ.

Be the first to comment on "ಶಾಸಕ ರಾಜೇಶ್ ನಾಯ್ಕ್ ಗ್ರಾಮವಿಕಾಸ ಯಾತ್ರೆಗೆ ಸಕಲ ಸಿದ್ಧತೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಉದ್ಘಾಟನೆ, ರಾಜ್ಯ, ನೆರೆರಾಜ್ಯದ ಪ್ರಮುಖ ನಾಯಕರು ಭಾಗಿ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*