ಶ್ರೀ ಕ್ಷೇತ್ರ ಬರಿಮಾರು ಶ್ರೀ ಮಹಮ್ಮಾಯ ದೇವಸ್ಥಾನದಲ್ಲಿ ವರ್ಷಂಪ್ರತಿ ವಿಜೃಂಭಣೆಯಿಂದ ನಡೆಯುವ ಸಹಸ್ರ ಹೂವಿನ ಪೂಜೆ, ಸಹಸ್ರ ಕರ್ಪೂರಾರತಿ, ಶತಕಲಶಾಭಿಷೇಕ ಮತ್ತು ಸಾನಿಧ್ಯಹವನವನ್ನು ಶ್ರೀ ದೇವಿಯ ಸಾನಿಧ್ಯ ಅಭಿವೃದ್ದಿ ಹಾಗೂ ಎಲ್ಲರ ಶ್ರೇಯೋಭಿವೃದ್ಧಿಗಾಗಿ ಜನವರಿ 6ರಂದು ಶುಕ್ರವಾರ ವಿವಿಧ ಧಾರ್ಮಿಕ ಅನುಷ್ಠಾನಗಳೊಂದಿಗೆ ನಡೆಸಲಾಗುವುದು ಎಂದು ಅನುವಂಶಿಕ ಆಡಳಿತ ಮೊಕ್ತೇಸರರಾದ ಬಿ.ರಾಕೇಶ ಪ್ರಭು ಮತ್ತು ಪ್ರಧಾನ ತಂತ್ರಿಗಳಾದ ಪಂಡಿತ್ ಎಂ.ಕಾಶೀನಾಥ ಆಚಾರ್ಯ ತಿಳಿಸಿದ್ದಾರೆ.
ಬೆಳಗ್ಗೆ 8ಕ್ಕೆ ಪ್ರಾರ್ಥನೆ, 9.30ಕ್ಕೆ ಪಂಚಾಮೃತ ಅಭಿಷೇಕ, 10.30ಕ್ಕೆ ಮಹಾಭಿಷೇಕ, ಶತಕಲಶಾಭಿಷೇಕ, ಪುಳಕಾಭಿಷೇಕ, ಬ್ರಹ್ಮಕಲಶಾಭಿಷೇಕ, ಅಷ್ಟಮಂಗಲ, ನಿರೀಕ್ಷಣೆ, ಪ್ರಸನ್ನ ಪೂಜೆ, ಶ್ರೀದೇವರಿಗೆ ಪಟ್ಟ ಕಾಣಿಕೆ, ಮೂಲಮಂತ್ರ ಹವನ, ಸಾನಿಧ್ಯ ಹವನ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಮಹಾಪೂಜೆ, ಸೇವಾದಾರರಿಗೆ ಪ್ರಸಾದ ಮತ್ತು ಸಮಾರಾಧನೆ ಇರಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಜನವರಿ 6ರಂದು ಬರಿಮಾರು ಶ್ರೀ ಮಹಾಮ್ಮಾಯ ದೇವಸ್ಥಾನದಲ್ಲಿ ಶತಕಲಶಾಭಿಷೇಕ, ಸಹಸ್ರ ಹೂವಿನ ಪೂಜೆ, ಸಾನಿಧ್ಯ ಹವನ"
Be the first to comment on "ಜನವರಿ 6ರಂದು ಬರಿಮಾರು ಶ್ರೀ ಮಹಾಮ್ಮಾಯ ದೇವಸ್ಥಾನದಲ್ಲಿ ಶತಕಲಶಾಭಿಷೇಕ, ಸಹಸ್ರ ಹೂವಿನ ಪೂಜೆ, ಸಾನಿಧ್ಯ ಹವನ"