ಬಂಟ್ವಾಳ: ಅಂಬೇಡ್ಕರ್ ನಗರ ವಸತಿ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆಯಡಿಲ್ಲಿ ಮನೆ ಮಂಜೂರಾದ ಫಲಾನುಭವಿಗಳಿಗೆ ಕಾಮಗಾರಿ ಅದೇಶ ಪತ್ರವನ್ನು ಬಂಟ್ವಾಳ ಶಾಸಕರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ವಿತರಿಸಿದರು.
ಪುರಸಭಾ ವ್ಯಾಪ್ತಿಯಲ್ಲಿ ಈವರೆಗೆ ಅರ್ಜಿ ನೀಡಿದ ಒಟ್ಟು 65 ಮಂದಿಗೆ ಫಲಾನುಭವಿಗಳಿಗೆ ಹಕ್ಕು ನೀಡಲಾಗಿದ್ದು, ಇನ್ನು ನಿವೇಶನ ರಹಿತರು ಶೀಘ್ರವಾಗಿ ಪುರಸಭೆಗೆ ಅರ್ಜಿ ನೀಡಿದರೆ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ನೀಡಲಾಗುವುದು ಎಂದು ಅವರು ಹೇಳಿದರು. ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ, ಪುರಸಭಾ ಸದಸ್ಯರಾದ ವಿದ್ಯಾವತಿ ಪ್ರಮೋದ್ ಕುಮಾರ್, ಮೀನಾಕ್ಷಿ ಗೌಡ, ಶಶಿಕಲಾ, ದೇವಕಿ, ಹರಿಪ್ರಸಾದ್, ನಾಮನಿರ್ದೇಶಿತ ಸದಸ್ಯ ಚಂದ್ರಶೇಖರ ದರ್ಬೆ, ಪುರಸಭಾ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೊ ಮತ್ತಿತರರು ಉಪಸ್ಥಿತರಿದ್ದರು. ಉಮಾವತಿ ಫಲಾನುಭವಿಗಳ ಪಟ್ಟಿ ವಾಚಿಸಿದರು.
| ಪುರಸಭಾ ವ್ಯಾಪ್ತಿಯ ಜನರಲ್ಲಿ ಸಹಕಾರಕ್ಕೆ ಪ್ರಾಜೆಕ್ಟ್ ಡೈರೆಕ್ಟರ್ ಸಂತೋಷ್ ಕುಮಾರ್ ಮನವಿ | ನೀರು ಶುದ್ಧೀಕರಣ ಘಟಕಕ್ಕೆ ಭೇಟಿ,…