ಬಂಟ್ವಾಳ : ಸಿಡಿಲು ಬಡಿದು ಬಾಲಕನೋರ್ವ ಮೃತಪಟ್ಟ ಘಟನೆ ಸೋಮವಾರ ರಾತ್ರಿ ಕರಿಯಂಗಳ ಗ್ರಾಮದ ಸಾಣೂರು ಪದವಿನಲ್ಲಿ ನಡೆದಿದೆ.
ಸಾಣೂರುಪದವು ಗಣೇಶ್ ಆದಿದ್ರಾವಿಡ ಅವರ ಪುತ್ರ ಕಾರ್ತಿಕ್ (16) ಮೃತಪಟ್ಟ ಬಾಲಕ.
ರಾತ್ರಿ 9 ರ ಸುಮಾರಿಗೆ ಊಟ ಮುಗಿಸಿ ಮಲಗಿದ್ದು, 9.30 ,ರ ಸುಮಾರಿಗೆ ಜೋರಾಗಿ ಸಿಡಿಲು ಸಹಿತ ಮಳೆ ಬಂದು, ಮಲಗಿದ್ದವರಿಗೆ ಕರೆಂಟ್ ಶಾಕ್ ಹೊಡೆದ ಅನುಭವ ವಾಗಿದೆ .ಈ ವೇಳೆ ಮನೆಮಂದಿ ಹಾಲ್ ಗೆ ಓಡಿ ಬಂದಿದ್ದು, ಅದರೆ ಕಾರ್ತಿಕ್ ಏಳದೆ ಇದ್ದಾಗ, ಆತನನ್ನು ತಕ್ಷಣವೇ ಕೈಕಂಬದ ಕ್ಲಿನಿಕ್ ಗೆ ಕರೆತರಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆ ಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆ ಗೆ ಸಾಗಿಸಿದಾಗ ವೈದ್ಯ ರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ .
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Be the first to comment on "ಸಿಡಿಲು ಬಡಿದು ಬಾಲಕ ಮೃತ್ಯುವಶ"