ಬಂಟ್ವಾಳ: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಸಭೆ,ಬಂಟ್ವಾಳದ ಕನ್ನಡ ಭವನದಲ್ಲಿ ನಡೆಯಿತು.
ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ. ಎಂ.ಪಿ.ಶ್ರೀನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯ ಮುಖ್ಯಾಂಶಗಳು, ಜಿಲ್ಲಾ ಸಮ್ಮೇಳನ ನಡೆಸುವ ಕುರಿತು ತಾಲ್ಲೂಕಿನ ಸಾಹಿತ್ಯಿಕ ವಿವರಗಳು,ಸದಸ್ಯತ್ವ ಅಭಿಯಾನ ಹಾಗೂ ಅಧ್ಯಕ್ಷರ ಅನುಮತಿಯೊಂದಿಗೆ ಇತರ ವಿಚಾರಗಳನ್ನು ಚರ್ಚಿಸಲಾಯಿತು.
ಈ ಸಂದರ್ಭ ಈ ವರ್ಷದ ರಾಜ್ಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಯದುಪತಿ ಗೌಡ ಅವರನ್ನು ಪರಿಷತ್ತು ವತಿಯಿಂದ ಗೌರವಿಸಲಾಯಿತು. ಸಾಹಿತ್ಯ ಪರಿಷತ್ತಿನ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಾ. ಮಾಧವ ಮೂಡುಕೊಣಾಜೆ ಅಭಿನಂದನಾ ನುಡಿಗಳನ್ನಾಡಿದರು.
ಗೌರವ ಕೋಶಾಧ್ಯಕ್ಷರಾದ ಬಿ.ಐತಪ್ಪ ನಾಯ್ಕ್, ಗೌರವ ಕಾರ್ಯದರ್ಶಿಗಳಾದ ಎಚ್ ವಿನಯ ಆಚಾರ್, ದ.ಕ.ಜಿಲ್ಲಾ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಾಳಾದ ಕೆ.ಸೇಸಪ್ಪ ರೈ ಕಡಬ, ಚಂದ್ರಶೇಖರ ಪೇರಾಲು ಸುಳ್ಯ, ಡಾ. ಡಿ. ಯದುಪತಿ ಗೌಡ ಬೆಳ್ತಂಗಡಿ, ಉಮೇಶ ನಾಯಕ್ ಪುತ್ತೂರು, ವಿಶ್ವನಾಥ ಬಂಟ್ವಾಳ, ಡಾ. ಮಂಜುನಾಥ ಎಸ್ ಮಂಗಳೂರು, ವೇಣುಗೋಪಾಲ ಶೆಟ್ಟಿ ಮೂಡಬಿದಿರೆ, ಮೋಹನದಾಸ ಸುರತ್ಕಲ್, ಪೂವಪ್ಪ ನೇರಳಕಟ್ಟೆ, ರಾಮಚಂದ್ರ ಪಳ್ಳತ್ತಡ್ಕ, ತೇಜಸ್ವಿ ಅಂಬೆಕಲ್ಲು, ಚಂದ್ರಹಾಸ ಶೆಟ್ಟಿ ಉಪಸ್ಥಿತರಿದ್ದರು. ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ರಾಜೇಶ್ವರಿ ಎಂ.ಕಾರ್ಯಕ್ರಮ ನಿರೂಪಿಸಿ,ಧನ್ಯವಾದಗೈದರು.

Be the first to comment on "ಬಂಟ್ವಾಳದಲ್ಲಿ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳ ಸಭೆ"