







ಶ್ರೀ ಶಾರದಾ ಫ್ರೆಂಡ್ಸ್ ಸರ್ಕಲ್ (ರಿ.), ವಿದ್ಯಾನಗರ ಸಜೀಪಮುನ್ನೂರು, ಈ ಸಂಘ ಕಳೆದ 30 ವರ್ಷಗಳಿಂದ ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸುತ್ತಿದ್ದು, ಸಂಘದ ಸದಸ್ಯರು ದುಡಿದ ಸಂಬಳದ ಸ್ವಲ್ಪಭಾಗವನ್ನು ಸಮಾಜ ಸೇವೆಗೆ ದೇಣಿಗೆಯಾಗಿ ನೀಡಿ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಅರಳು ಪ್ರತಿಭೆ ಗಳನ್ನು ಆನ್ವೇತಿಸಿ, ಪೋಷಿಸಿ, ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿದೆ. ಇದುವರೆಗೆ ಸೇವಾ ಕಾರ್ಯಗಳನ್ನು ಅಡೆತಡೆಯಿಲ್ಲದೆ ನಿರಂತರವಾಗಿ ನಡೆಸಿಕೊಂಡು ಬಂದಿರುತ್ತದೆ.ಈವರೆಗೆ ಯಾವುದೇ ಪ್ರಚಾರಗಳಿಗೆ ಒತ್ತು ಕೊಡದೇ ಕೇವಲ ಸೇವಾಧರ್ಮದಿಂದ ಸಮಾಜಪರವಾದ ಕೆಲಸಗಳನ್ನು ಮಾಡುತ್ತಾ ಬಂದಿರುವ ಈ ಸಂಘವು ಪ್ರಸಕ್ತ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವುದು ವಿಶೇಷ.
Be the first to comment on "ಮೌನ ಸಾಧಕ ಬಳಗ ಶ್ರೀ ಶಾರದಾ ಫ್ರೆಂಡ್ಸ್ ಸರ್ಕಲ್ ಬಳಗ ಸಜಿಪಮುನ್ನೂರು ತಂಡಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗರಿ"